

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ
ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಮ್ಮ 34ನೇ ವರ್ಷದ ಶ್ರಾವಣ ಮಾಸದಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ಜು.25ರಿಂದ ಆಗಸ್ಟ್ 23ರವರೆಗೆ ನಡೆಯಲಿದೆ ಎಂದುಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.
ಶ್ರಾವಣ ಮಾಸದ ಅಂಗವಾಗಿ 28 ರಂದು ಶ್ರೀರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ
ಶಿವಾಚಾರ್ಯ ಭಗವತ್ಪಾದರ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಖಾಂಡ್ಯ ಮತ್ತು ಜಾಗರ
ಹೋಬಳಿಯ ಶಿಷ್ಯ ಸಮುದಾಯದವರು ಪೂಜಾ ಹಾಗೂ ಅನ್ನದಾಸೋಹ ಸೇವೆ ನಡೆಸುವರು.
ಆಗಸ್ಟ್ 1ರಂದು ಶ್ರೀರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರರುದ್ರಮುನಿದೇವ ಶಿವಾಚಾರ್ಯಭಗವತ್ಪಾದರ ಪುಣ್ಯಸ್ಮರಣೆ ನಡೆಯಲಿದ್ದು, ಆಲ್ದೂರು ಹೋಬಳಿಯ ವೀರಶೈವ ಸಮಾಜದಿಂದ ಪೂಜಾಹಾಗೂ ಅನ್ನ ದಾಸೋಹ ಸೇವೆ ನಡೆಯಲಿದೆ.
ವರ್ಷದ 365 ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತರ ಸಿಹಿ ಪ್ರಸಾದ ವಿತರಣೆಸೇವೆಯನ್ನು ಭದ್ರಾವತಿಯ ಲಿಂ.ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೆರವೇರಿಸಲಿದ್ದಾರೆ.
ಬೆಂಗಳೂರಿನ ಲತಾ ಜಿಗಳೂರ ಪುರಾಣ ಪೂಜಾ ಸೇವೆ, ಚಿಕ್ಕಮಗಳೂರಿನ ಶ್ರೀಜಗದ್ಗುರು
ರೇಣುಕಾಚಾರ್ಯ ಟ್ರಸ್ಟ್‌ನವರು ಗದ್ದಿಗೆ ಹೂವಿನ ಸೇವೆ, ಗದಗ-ಬೆಟಗೇರಿಯ ಶ್ರೀಜಗದ್ಗುರು
ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟಿನವರು ದಾಸೋಹ ಸೇವೆ, ಭದ್ರಾವತಿಯ
ಎಸ್.ಎಸ್.ಉಮೇಶ್, ಬೆಂಗಳೂರಿನ ಆರ್.ಗಣೇಶ ಕುಮಾರ್ ಹೂವಿನ ಸೇವೆ ಹಾಗೂ
ಚಿಕ್ಕಮಗಳೂರಿನ ಶ್ರೀದೇವ ಕೋ ಸಂಸ್ಥೆ ಪತ್ರಿಕಾ ಮುದ್ರಣ ಸೇವೆ ನಡೆಸಲಿದ್ದಾರೆ.
ಶ್ರಾವಣ ಮಾಸ ಪರ್ಯಂತರವಾಗಿ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ
ಶಿವಾಚಾರ್ಯ ಸ್ವಾಮಿಗಳು ಪ್ರತಿ ದಿನ ಸಂಜೆ 7 ಗಂಟೆಗೆ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣಪ್ರವಚನ ಮಾಡುವರು. ಇದೇ ಸಂದರ್ಭದಲ್ಲಿ ಆಗಮಿಸುವ ಪಟ್ಟಾಧ್ಯಕ್ಷರಿಂದ, ವಾಗ್ಮಿಗಳಿಂದನುಡಿಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಪ್ರತಿ ಸೋಮವಾರ ಹಾಗೂ ಗುರುವಾರ ಶ್ರೀರಂಭಾಪುರಿ ಜಗದ್ಗುರುಗಳು ಸಭೆಗೆ ಆಗಮಿಸಿ ಶುಭಾಶೀರ್ವಾದ ಸಂದೇಶ ನೀಡಲಿದ್ದಾರೆ.
ಪ್ರತಿನಿತ್ಯ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರಮಹಾಲಿಂಗಕ್ಕೆ, ಶಕ್ತಿಮಾತೆ ಶ್ರೀ ಚೌಡೇಶ್ವರಿ-ಶ್ರೀ ಭದ್ರಕಾಳಿ, ಶ್ರೀಪಾರ್ವತಿ ಅಮ್ಮನವರಿಗೆ, ಲಿಂಗೈಕ್ಯಜಗದ್ಗುರುಗಳವರ ಗದ್ದುಗೆಗಳಿದೆ ಮಹಾರುದ್ರಾಭಿಷೇಕ, ಅಷ್ಟೋತ್ತರ ಮಹಾ ಮಂಗಲ ವಿಶೇಷ ಪೂಜೆನಡೆಯಲಿದೆ ಎಂದು ತಿಳಿಸಿದ್ದಾರೆ.