

ಗುಬ್ಬಿ: ಫಲಾನುಭವಿಗಳನ್ನು ಅಲೆದಾಡಿಸದೆ ಬಗರ್ಹುಕುಂ ಹಕ್ಕುಪತ್ರ ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಂದ ಹಣಕ್ಕೆ ಬೇಡಿಕೆ ಇಡಬಾರದು ಎಂದು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಬಗರ್ ಹುಕುಂ ಸಮಿತಿ ಅಧ್ಯಕ್ಷ, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದರು.
ತಾಲೂಕು ಕಚೇರಿಯ ಕೋರ್ಟ್ಹಾಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಗರ್ ಹುಕ್ಕುಂ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ, ರೈತರಿಂದ ಹಣ ಪಡೆಯದೆ ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದರು.
2016ರಿಂದ ಇಲ್ಲಿಯವರೆಗೆ ಬಗರ್ ಹುಕ್ಕುಂ ಸಮಿತಿ ಸಭೆ ಗುರುವಾರ ನಡೆಸಿದ್ದು, ಆರು ವರ್ಷದ ಹಿಂದೆ ತಾಲೂಕಿನಲ್ಲಿ ಸಭೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಾನೇ ಶಾಸಕನಾಗಿದ್ದಾಗ ಅರ್ಜಿಗಳನ್ನು ಪಡೆಯಲಾಗಿತ್ತು. ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹಾಗೂ ಕಡಬ ಹೋಬಳಿಯ ಒಟ್ಟು 7 ಪಂಚಾಯಿತಿಗಳು ತುರುವೇಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಮಿತಿಯ ಸಭೆ ಕರೆಯಲಾಗಿದೆ. ಒಟ್ಟು 11 ಅರ್ಜಿಗಳನ್ನು ಮೊದಲ ಸಭೆಯಲ್ಲಿ ಸಮಿತಿಯ ಸರ್ವಾನುಮತದಿಂದ ಅನುಮೋದನೆ ಪಡೆಯಲಾಗಿದೆ. ಎರಡನೇ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಹಾಗೂ ತಹಸೀಲ್ದಾರ್ ಸ್ಥಳಪರಿಶೀಲನೆ ನಡೆಸಿದ ಬಳಿಕ ಮತ್ತೊಂದು ಸಭೆ ಕರೆದು ಸಾಧಕ&ಬಾಧಕಗಳನ್ನು ಚರ್ಚಿಸಿ, ಸಭೆಯ ತೀಮಾರ್ನವನ್ನು ಪ್ರಸ್ತಾಪಿಸಲಾಗುವುದು. ಈ ಭಾಗದ ರೈತರು 10&20 ಗುಂಟೆ ಉಳ್ಳವರಷ್ಟೇ ಇರುವ ಕಾರಣ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ ಹಾಗಾಗಿ ಸಾಗುವಳಿ ಚೀಟಿ ವಿತರಣೆ ಮಾಡುವ ನಿಟ್ಟಿನಲ್ಲಿ ಕೂಲಂಕುಷವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದರು. ಸಮಿತಿ ಸದಸ್ಯರಾದ ಆರ್.ನಂಜುಂಡಪ್ಪ, ಟಿ.ಎಚ್.ಗುರುದತ್, ವಿನೋದ, ಕಡಬ ಉಪ ತಹಸೀಲ್ದಾರ್ ವರುಣ್, ಕಂದಾಯ ನಿರೀಕ್ಷಕ ರಾಜಶೇಖರ್, ಸಿ.ಎಸ್.ಪುರ ಕಂದಾಯ ನಿರೀಕ್ಷಕಿ ಪ್ರಮೀಳಾ ಇದ್ದರು.
ಮಧ್ಯವರ್ತಿಗಳ ಬಳಿ ಹೋಗದಿರಿ:
ಇಪ್ಪತ್ತು ವರ್ಷಗಳಿಂದ ಉಳುಮೆ ಚೀಟಿಗಳನ್ನು ವಿತರಿಸಲಾಗುತ್ತಿದೆ. ಯಾವುದೇ ಫೈಲ್ಗಳನ್ನೂ ಹೊರಗೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮಿತಿಯಲ್ಲಿ ಮಧ್ಯವರ್ತಿಗಳ ಆಟ ನಡೆಯುವುದಿಲ್ಲ. ಯಾವುದೇ ರೈತರು ಮಧ್ಯವರ್ತಿಗಳಿಗೆ ಆಗಲಿ, ಅಧಿಕಾರಿಗಳಿಗೆ ಹಣ ನೀಡಬಾರದು. ಕಾನೂನಿನ ಚೌಕಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಈ ಹಿಂದೆ ಅರ್ಜಿ ಸಲ್ಲಿಸಿರುವ ರೈತರಿಂದ ಅಗತ್ಯ ದಾಖಲೆಗಳನ್ನು ಪಡೆದ ಶಾಸಕರು, ಪರಿಶೀಲಿಸಿ, ಕ್ರಮವಹಿಸುವಂತೆ ತಹಸೀಲ್ದಾರ್ ಬಿ.ಆರತಿಗೆ ಸೂಚಿಸಿದರು.
ಬಯೋಮೆಟ್ರಿಕ್ ಕಡ್ಡಾಯ
ತಹಸೀಲ್ದಾರ್ ಆರತಿ ಮಾತನಾಡಿ, ಡಿಜಿಟಲೀಕರಣ ಹಿನ್ನೆಲೆ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದ್ದು, ಜಮೀನು ಮಂಜೂರು ಮಾಡಲು, ಯಾವುದೇ ಅನುಮೋದನೆ ಪಡೆಯುವ ವೇಳೆ ಬಗರ್ ಹುಕುಂ ಸಮಿತಿಯವರ ಬಯೋಮೆಟ್ರಿಕ್ ಅವಶ್ಯಕತೆಯಿದೆ. ಸಿ.ಎಸ್.ಪುರ ಹಾಗೂ ಕಡಬ ಹೋಬಳಿಯ ಕೆಲ ಪಂಚಾಯಿತಿಗಳು ಸಮಿತಿ ವ್ಯಾಪ್ತಿಗೆ ಬರಲಿದ್ದು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ತನಿಖೆ ನಡೆಸಿ ವರದಿ ನೀಡಿದ ಬಳಿಕ ವರದಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಮತ್ತೊಮ್ಮೆ ನಾನು ಸ್ಥಳ ಪರಿಶೀಲನೆ ಮಾಡಿ, ಆನ್ಲೈನ್ ಮೂಲಕ ಅರ್ಜಿಯನ್ನು ಅನುಮೋದಿ
ಸಲಾಗುವುದು ಎಂದರು.