

ರಟ್ಟಿಹಳ್ಳಿ: ತಾಲೂಕಿನ ನೇಶ್ವಿ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ಶ್ರೀ ಬಸವಾಂಜನೇಯ ದೇವಸ್ಥಾನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯೋಜನಾಧಿಕಾರಿ ಮಂಜುನಾಥ ಅವರು 1.50 ಲಕ್ಷ ರೂ. ಮೌಲ್ಯದ ಡಿ.ಡಿ.ಯನ್ನು ಕಮಿಟಿ ಅಧ್ಯಕ್ಷ ಪ್ರಭುಗೌಡ ಬಸಪ್ಪನವರ ಅವರಿಗೆ ನೀಡಿದರು.
ಕಮಿಟಿ ಉಪಾಧ್ಯಕ್ಷ ಈರಣ್ಣಗೌಡ ಹೊಸಗೌಡ್ರ, ಶಿವಬಸಪ್ಪ ಬಣಕಾರ, ವಲಯ ಮೇಲ್ವಿಚಾರಕ ಚೆನ್ನಪ್ಪ, ಕೃಷಿ ಮೇಲ್ವಿಚಾರಕ ಧರ್ಮಪ್ಪ ಜೋಗೇರ, ಸೇವಾ ಪ್ರತಿನಿಧಿ ನಾಗರಾಜ ಈದರಮನಿ, ಅಶ್ವಿನಿ ಚಳಗೇರಿ, ಬಸನಗೌಡ ಬಸಪ್ಪನವರ, ಚನ್ನಬಸಪ್ಪ ಬತ್ತಿಕೊಪ್ಪ, ಮಾಲತೇಶ ನಡುವಿನಮನಿ, ಸಿದ್ದಪ್ಪ ಪೂಜಾರ, ಹಾಲಮ್ಮ ಮಲ್ಲೂರು, ಶಾಂತವ್ವ ಓಲೇಕಾರ, ಕೋಮಲ ಹೊಸಮನಿ ಹಾಗೂ ಗ್ರಾಮಸ್ಥರು ಇದ್ದರು.