ಪಟ್ಟಣದ ವ್ಯಾಪ್ತಿಯಲ್ಲಿ 94 ಸಿಸಿ ಹಕ್ಕುಪತ್ರ ವಿತರಣೆ

5 nrp 1
Published on

ಎನ್.ಆರ್.ಪುರ: ಬಡವರಿಗೆ ಹಕ್ಕುಪತ್ರ ನೀಡಲು ವಿರೋಧ ಪಕ್ಷಗಳು ಅಡ್ಡಿ ಪಡಿಸಿದ್ದರಿಂದ ಹಕ್ಕುಪತ್ರ ನೀಡಲು ವಿಳಂಬವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ಪ್ರವಾಸಿ ಮಂದಿರದಲ್ಲಿ ಪಟ್ಟಣದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ 29 ಲಾನುಭವಿಗಳಿಗೆ 94 ಸಿಸಿ ಅಡಿ ಹಕ್ಕುಪತ್ರ ವಿತರಿಸಿ ಮಾತನಾಡಿ, ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡಬಾರದು ಎಂದು ಅಧಿಕಾರಿಗಳಿಗೂ ಬೆದರಿಕೆ ಹಾಕಲಾಗಿತ್ತು. ಹಕ್ಕುಪತ್ರ ವಿತರಣೆಗೆ ಹಲವು ಬಾರಿ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಅಡ್ಡಿಪಡಿಸಿದ್ದರಿಂದ ವಿಳಂಬವಾಯಿತು. ಇದೇ ಮೊದಲ ಬಾರಿಗೆ 94 ಸಿಸಿ ಅಡಿ ಪಟ್ಟಣದ ಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.
ಹಿಂದೆ ಜನತಾ ದರ್ಶನ ಕಾರ್ಯಕ್ರಮದಲ್ಲಿ 49ಹಕ್ಕುಪತ್ರ, ನಿನ್ನೆ ತಾಲೂಕಿನ ವಿವಿಧ ಗ್ರಾಮಗಳ ಲಾನುಭವಿಗಳಿಗೆ 94ಸಿ ಅಡಿ 32ಹಕ್ಕುಪತ್ರಗಳನ್ನು ಕಾನೂನು ಚೌಕಟ್ಟಿನಲ್ಲಿ ನೀಡಲಾಗಿದೆ. ಕಾನೂನು ಮೀರಿ ಹಕ್ಕುಪತ್ರ ನೀಡಿದರೆ ಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಕಾನೂನಿನ ಎಲ್ಲ ಸಮಸ್ಯೆ ಬಗೆಹರಿಸಿಕೊಂಡು ಪಟ್ಟಣದ ವ್ಯಾಪ್ತಿಯಲ್ಲಿ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, 60 ವರ್ಷದಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ 29 ಕುಟುಂಬಗಳಿಗೆ ಇಂದು 94 ಸಿಸಿ ಅಡಿ ಹಕ್ಕು ಪತ್ರ ನೀಡಲಾಗಿದೆ. ಈಗ ಮನೆ ಜಾಗ ನಿಮ್ಮ ಸ್ವಂತ ಆಸ್ತಿಯಾಗಿದೆ. ಒಳ್ಳೆಯ ಕೆಲಸ ಮಾಡಲು ಹೋದಾಗ ನೂರಾರು ಅಡ್ಡಿ, ಆತಂಕ ಎದುರಾಗುತ್ತದೆ. ನನ್ನ ಹುಟ್ಟೂರಿನ ಋಣ ತೀರಿಸಲು ಎನ್.ಆರ್.ಪುರಕ್ಕೆ ಹೆಚ್ಚು ಅನುದಾನ ತರಲಾಗುವುದು. ರಸ್ತೆ ಅಗಲೀಕರಕ್ಕಾಗಿ ಸರ್ಕಾರದ ಮುಂದೆ 60 ಕೋಟಿ ರೂ.ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net