

ಔರಾದ್: ಮಕ್ಕಳ ಜ್ಞಾನಾರ್ಜನೆಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆ ಅತ್ಯಂತ ಉಪಕಾರಿಯಾಗಿದೆ ಎಂದು ವಡಗಾಂವ(ದೇ) ವಲಯ ಸಂಪನ್ಮೂಲ ವ್ಯಕ್ತಿ ರವೀಂದ್ರ ಡಿಗ್ಗಿ ಹೇಳಿದರು.
ವಡಗಾಂವ(ದೇ) ಮದರ್ ತೆರೇಸಾ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದ ಅವರು, ಕೇವಲ ಒಂದು ರೂಪಾಯಿಯಲ್ಲಿ ೮ ಪುಟಗಳ ಸಮಗ್ರ ಮಾಹಿತಿವುಳ್ಳ ಸಂಚಿಕೆ ಮನೆಯ ತನಕ ತಲುಪಿಸುವ ಕೆಲಸ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರದಾಗಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಳವಾಗುವ ಉದ್ದೇಶದಿಂದ ಈ ಸಂಚಿಕೆ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಗುರಿ ಸಾಧನೆಗೆ ಪೂರಕವಾಗಿದೆ ಎಂದರು.
ವಿಶೇಷ ಅತಿಥಿಯಾಗಿದ್ದ ಸಂತಪುರ ಹೋಲಿಕ್ರಾಸ್ ಶಾಲೆಯ ಶಿಕ್ಷಕ ಸತೀಶ ನಾಗೂರೆ ಮಾತನಾಡಿ, ಮಕ್ಕಳು ಶಿಕ್ಷಕರು ಹೇಳಿದ ಪಾಠದ ಜತೆ ನಿತ್ಯ ವಿದ್ಯಾರ್ಥಿ ಉದ್ಯೋಗ ಮಿತ್ರ ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಪತ್ರಕರ್ತ ಮಲ್ಲಪ್ಪ ಗೌಡ ಮಾತನಾಡಿದರು. ಫಿರೋಜ್ ಖಾನ್, ಪೂಜಾ, ಮಹಾದೇವಿ, ಸಿದ್ದಮ್ಮ, ಕಾವ್ಯಶ್ರೀ, ಅಶ್ವಿನಿ, ಶಿಲ್ಪಾ, ಶೀಲಾವತಿ ಇತರರಿದ್ದರು.
ಜಯವಂತ ಉಜನಿಕರ್ ಸ್ವಾಗತಿಸಿದರು. ಭೀಮರಾವ ವಂದಿಸಿದರು. ಶಿಕ್ಷಕ ರಮೇಶ ನಿರೂಪಣೆ ಮಾಡಿದರು.