ಅರಣ್ಯ ಇಲಾಖೆ ಅಭಿಪ್ರಾಯದ ನಂತರ ಹಕ್ಕುಪತ್ರ ವಿತರಣೆ

dc meena nagaraj (2)
ಮೀನಾ ನಾಗರಾಜ್
Published on

ಕೊಪ್ಪ: ಮನೆ ಸಕ್ರಮಕ್ಕಾಗಿ 94ಸಿ, 94ಸಿಸಿ ಅಡಿ ಅರ್ಜಿಗಳನ್ನು ಸಲ್ಲಿಸದವರಿಗೆ ಅರಣ್ಯ ಇಲಾಖೆ ಅಭಿಪ್ರಾಯ ಬರುತ್ತಿದ್ದಂತೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಸೊಪ್ಪಿನಬೆಟ್ಟ, ಮೀಸಲು ಅರಣ್ಯ ಸಮಸ್ಯೆಯಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇಗಳನ್ನು ನಡೆಸಲಾಗುತ್ತಿದೆ. ಸೊಪ್ಪಿನ ಬೆಟ್ಟ, ಗೋಮಾಳ ಪ್ರದೇಶಗಳ ಸಮಸ್ಯೆಗಳನ್ನು ಗಮನಿಸಿ ಅರ್ಹ ಅರ್ಜಿಗಳಿಗೆ ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಹಿಂದೆ ಹಕ್ಕುಪತ್ರಗಳಿಗೆ ಇಲಾಖೆಯಿಂದ ಹಣ ಕಟ್ಟಿಸಿಕೊಂಡು ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಿದ ಅರ್ಜಿಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು. ಅಧಿಕಾರಿಗಳ ಜತೆಯಲ್ಲಿ ನಡೆಸಿದ ಸಭೆಯಲ್ಲಿ ತಾಲೂಕು ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಕುರಿತು, ಲಿಫ್ಟ್ ಅಳವಡಿಕೆ ಇತರ ಕಾಮಗಾರಿ, ನಾಡಕಚೇರಿಗಳ ದುರಸ್ತಿಗೆ ಚರ್ಚೆ ನಡೆಸಲಾಯಿತು ಎಂದರು. ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಭೂಮಿ ಶಾಖೆ ಇತರ ವಿಭಾಗಗಳಿಗೆ ತೆರಳಿ ಕಡತಗಳನ್ನು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net