

ಕೂಡ್ಲಿಗಿ: ಸರ್ಕಾರದ ಅನೇಕ ಮಹತ್ವಾಕಾಂಕ್ಷೆ ಯೋಜನೆಗಳು ಆರ್ಥಿಕವಾಗಿ ಹಿಂದುಳಿದವರ ಪರವಾಗಿವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಮೂರನೇ ವಾರ್ಡಿನ ಬಸವಲಿಂಗೇಶ್ವರ ದೇವಸ್ಥಾನದ ಬಳಿ ಪಪಂ ಕಚೇರಿಯಿಂದ ಆಯೋಜಿಸಿದ್ದ ಫಾರ್ಮ್ ನಂ-3 ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ಪಟ್ಟಣದ 20 ವಾರ್ಡ್‌ಗಳ ಜನರಿಗೆ ಅವಶ್ಯವಿರುವ ಫಾರ್ಮ್-3 ಇದ್ದ ಸ್ಥಳದಲ್ಲೇ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದು ಕಚೇರಿಗಳಿಗೆ ವೃಥಾ ಅಲೆದಾಡದಿರಿ ಎಂದು ತಿಳಿಸಿದರು.