ಪತ್ರಿಕಾ ವಿತರಕರಿಗೆ ಇ ಶ್ರಮ ಕಾರ್ಡ್ ವಿತರಣೆ

02-01-Shiva-2
ರಾಯಚೂರಿನ ಜಿಲ್ಲಾಕಾರಿ ಕಚೇರಿಯಲ್ಲಿ ಪತ್ರಿಕಾ ವಿತರಕರಿಗೆ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಇ ಶ್ರಮ ಕಾರ್ಡ್ ವಿತರಿಸಿದರು. ಜಿಲ್ಲಾ ಕಾರ್ಮಿಕ ಅಕಾರಿ ಆರತಿ, ಬಾಲ ಕಾರ್ಮಿಕ ಯೋಜನೆ ಯೋಜನಾಕಾರಿ ಮಂಜುನಾಥ ರೆಡ್ಡಿ, ಪತ್ರಿಕಾ ವಿತರಕ ಬಸಪ್ಪ ಗೋರೆಬಾಳ ಇದ್ದರು.
Published on

ರಾಯಚೂರು: ಸ್ಥಳೀಯ ಜಿಲ್ಲಾಕಾರಿ ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿನಪತ್ರಿಕೆ ವಿತರಣೆ ಮಾಡುವ ವಿತರಕರಿಗೆ ಮಂಗಳವಾರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯದ ಇ ಶ್ರಮ ಕಾರ್ಡ್‌ಗಳನ್ನು ಜಿಲ್ಲಾಕಾರಿ ಚಂದ್ರಶೇಖರ ನಾಯಕ ವಿತರಿಸಿದರು.
ಕಾರ್ಮಿಕ ಇಲಾಖೆಯಿಂದ ಸ್ಥಳೀಯ ಪತ್ರಿಕಾಭವನದಲ್ಲಿ ಪತ್ರಿಕಾ ವಿತರಕರಿಗೆ ಇ ಶ್ರಮ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಸಲಾಗಿತ್ತು. ನಂತರ ನೋಂದಣಿ ಮಾಡಿಸಿಕೊಂಡ ವಿತರಕರಿಗೆ ಜಿಲ್ಲಾಕಾರಿ ಚಂದ್ರಶೇಖರ ನಾಯಕ ತಮ್ಮ ಕಚೇರಿಯಲ್ಲಿ ಕಾರ್ಡ್ ವಿತರಿಸಿದರು.
ಅಸಂಘಟಿತ ವಲಯದಲ್ಲಿ ಬರುವ ದಿನಪತ್ರಿಕೆ ವಿತರಕರು ಕರ್ತವ್ಯ ನಿರ್ವಹಿಸುವ ವೇಳೆ ಅಪಘಾತ, ಅವಘಡಕ್ಕೆ ಒಳಗಾಗುವ ಸಂಭವವಿರುತ್ತದೆ. ಹೀಗಾಗಿ ಕಾರ್ಮಿಕ ಇಲಾಖೆಯಿಂದ ಅವರ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇ ಶ್ರಮ ಕಾರ್ಡ್ ನೀಡಲಾಗುತ್ತಿದ್ದು, ವಿತರಕರು ಅದರ ಪ್ರಯೋಜನ ಪಡೆಯಬೇಕು ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಕಾರಿ ಆರತಿ, ಬಾಲ ಕಾರ್ಮಿಕ ಯೋಜನೆ ಯೋಜನಾಕಾರಿ ಮಂಜುನಾಥ ರೆಡ್ಡಿ, ಪತ್ರಿಕಾ ವಿತರಕ ಬಸಪ್ಪ ಗೋರೆಬಾಳ ಹಾಗೂ ಪತ್ರಿಕಾ ವಿತರಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net