ಪರಿಹಾರ ಆದೇಶ ಪತ್ರ ವಿತರಣೆ

Adesha
Published on

ರಟ್ಟಿಹಳ್ಳಿ: ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಕುಮದ್ವತಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮೃತಪಟ್ಟಿದ್ದ ಇಬ್ಬರು ಬಾಲಕರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಆದೇಶ ಪತ್ರವನ್ನು ಶಾಸಕ ಯು.ಬಿ. ಬಣಕಾರ ಮಂಗಳವಾರ ವಿತರಿಸಿದರು.

ತಾಲೂಕಿನ ಮಾಸೂರು ಗ್ರಾಮದ ಮಂಜುನಾಥ ಕಿಲ್ಲಾರಿ ಎಂಬುವರ ಮಗ ನಿಖಿಲ್ ಕಿಲಾರಿ ಮತ್ತು ಲಿಂಗರಾಜ ಕಳಸಪ್ಪ ಚಳಗೇರಿ ಎಂಬುವರ ಮಗ ಸಂಜಯ್ ಚಳಗೇರಿ 2022 ಏ.25ರಂದು ಮೃತಪಟ್ಟಿದ್ದರು.

ತಹಸೀಲ್ದಾರ್ ಕೆ. ಗುರುಬಸವರಾಜ, ಮಾಸೂರು ಗ್ರಾಪಂ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ, ಸದಸ್ಯರಾದ ನಿರ್ಮಲಾ ಚೆನ್ನಗಿರಿ, ಮುಬಿನಾ ಎಂ.ಜಿ, ಪಾತಿಮಾ ಬಳ್ಳಾರಿ, ರವಿ ಗೌರಕ್ಕನವರ, ಕಾವ್ಯ ಹಿತ್ತಲಮನಿ, ನಾರಾಯಣಪ್ಪ ಗಾಯಕವಾಡ, ಪ್ರಮೀಳಾ ನಡುವಿನಮನಿ, ಡಾ.ನಿಂಗಪ್ಪ ಚಳಗೇರಿ, ಮಲ್ಲೇಶಪ್ಪ ಗುತ್ತ್ಯಣ್ಣನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net