ವಿಜ್ಞಾನಿ ಗೋವಿಂದರಾಜ ಶೆಟ್ಟಿಗೆ ಶ್ರೀಗಳಿಂದ ಅಭಿನಂದನೆ

dj sirigere photo
Published on

ಸಿರಿಗೆರೆ: ಇಸ್ರೋ ಹಿರಿಯ ವಿಜ್ಞಾನಿಯಾಗಿರುವ ಗೋವಿಂದರಾಜ ಶೆಟ್ಟಿ, ಚಂದ್ರಯಾನ-3ರ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕೊಟ್ಟೂರು ತಾಲೂಕಿನ ತೋಲಳ್ಳಿ ಗ್ರಾಮದ ಸುಬ್ಬಣ್ಣ ಶೆಟ್ಟಿ ಅವರ ಪುತ್ರರಾಗಿರುವ ಗೋವಿಂದರಾಜ, ತರಳಬಾಳು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದರು.

ಬಳ್ಳಾರಿಯಲ್ಲಿ ಮೆಕಾನಿಕಲ್ ಡಿಪ್ಲೋಮಾ ಮತ್ತು ಚಿತ್ರದುರ್ಗದ ಜಿಎಂಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು 1998ರಲ್ಲಿ ಇಸ್ರೋ ಸೇರಿದ್ದರು.

ಕಳೆದ 26 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಗೋವಿಂದರಾಜ ಅವರ ಸಾಧನೆಯನ್ನು ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಶಂಸಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net