

ನರೇಗಲ್ಲ: ಚಂದ್ರಯಾನ-3 ಯಶಸ್ವಿಗೊಳಿಸಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಘನತೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೆಚ್ಚಿಸಿದೆ ಎಂದು ಯಲ್ಲಾಲಿಂಗೇಶ್ವರ ಮಠದ ಬಸವರಾಜ ಬಸವರಡ್ಡೇರ ಅಭಿಪ್ರಾಯಪಟ್ಟರು.
ಸಮೀಪದ ಅಬ್ಬಿಗೇರಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಬಾಂಧವ್ಯ ದೇಶಬಂಧು ಸಂಘಟನೆಯಿಂದ ಗುರುವಾರ ಆಯೋಜಿಸಿದ್ದ ಇಸ್ರೊ ವಿಜ್ಞಾನಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟನೆ ಸದಸ್ಯ ಸುರೇಶ ಬಸವರಡ್ಡೇರ ಮಾತನಾಡಿ, ಚಂದ್ರಯಾನ-3 ಸಫಲತೆ ಸಾಧಿಸಿದೆ. ಇದರಿಂದ ದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚುವಂತೆ ಈ ಸಾಧನೆ ಪ್ರೇರೇಪಿಸುತ್ತದೆ ಎಂದರು.
ಉಪನ್ಯಾಸಕ ಬಸವರಾಜ ಪಲ್ಲೇದ ಮಾತನಾಡಿ, ಈ ಸಾಧನೆ ಮಾಡಿದ ನಾಲ್ಕನೇ ದೇಶ ಭಾರತವಾಗಿದೆ. ಚಂದ್ರನ ರಚನೆ ಮತ್ತು ವಿಕಾಸದ ಸಂಶೋಧನೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಮಂಜುನಾಥ ಅಂಗಡಿ, ಗುರಣ್ಣ ಅವರಡ್ಡಿ, ಭೀಮಣ್ಣ ಚಿಕ್ಕೇನಕೊಪ್ಪ, ಮಲ್ಲಿಕಾರ್ಜುನ ಕಲ್ಲೇಶ್ಯಾಣಿ, ಎಚ್.ಟಿ. ದ್ವಾಸಲ, ಸುರೇಶ ಶಿರೋಳ, ಶೇಕಣ್ಣ ಶಿರೋಳ, ಭೀಮಶಿ ಮಲ್ಲಾಪೂರ, ಶಿವಪುತ್ರ ಕೆಂಗಾರ, ಲಕ್ಷ್ಮಣ ಹಿರೇಮನಿ, ಮಂಜು ಗುಜಮಾಗಡಿ, ಅಶೋಕ ಜಂತಲಿ, ಎಸ್.ಬಿ. ಜಂತಲಿ, ಕುಮಾರ ಭೀಮನಗೌಡ್ರ, ಎ.ಕೆ. ಮಳಗಿ, ಎಂ.ಎಸ್. ಕಂಬಳಿ, ಮುತ್ತು ದ್ವಾಸಲ, ಮಹಾಂತೇಶ ಇಮ್ರಾಪೂರ, ತಿಮ್ಮರಡ್ಡಿ ಇಮ್ರಾಪೂರ, ಎಂ.ಡಿ. ಬಸವರಡ್ಡೇರ, ಸಂಗಪ್ಪ ಕುಂಬಾರ, ರವಿ ಅಡ್ನೂರ, ಪ್ರಕಾಶ ಮಲ್ಲಾಪೂರ, ಮುತ್ತಪ್ಪ ಕೆಂಗಾರ, ಮಲ್ಲು ಯಲ್ಲರಡ್ಡಿ, ಸೋಮು ಶಿರೋಳ, ಸಂಜು ತಾಳಿಕೋಟಿ, ಇತರರಿದ್ದರು. ಎ.ವಿ. ವೀರಾಪೂರ ಸ್ವಾಗತಿಸಿ, ನಿರೂಪಿಸಿದರು. ಶಿವು ಜಂತಲಿ ವಂದಿಸಿದರು.