ವಿಜ್ಞಾನಿಗಳು ದೇಶಕ್ಕೆ ಇನ್ನಷ್ಟು ಕೀರ್ತಿತರಲೆಂದು ಕಾಂಗ್ರೆಸ್ ಕಾರ್ಯಕರ್ತರಿಂದ ಪೂಜೆ, ಸಿಹಿ ಹಂಚಿಕೆ

cong chndrayan
Published on

ಬೆಂಗಳೂರು: ಇಸ್ರೋ ತಂಡದಿಂದ ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ದೇಶದ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಭಾರತಕ್ಕೆ ಇನ್ನು ಹೆಚ್ಚಿನ ಕೀರ್ತಿ ತರಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ವಸಂತ ನಗರದ ಶ್ರೀಮಾರುತಿ ಭಗವಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, 1962 ದೇಶದ ಪ್ರಧಾನಿಯಾಗಿದ್ದ ಜವಾಲಾಲ್ ನೆಹರು ಹಾಗೂ ಇಂದಿರಾ ಗಾಂಧಿಯವರು 1975 ರಲ್ಲಿ ಇಸ್ರೋ ಸಂಸ್ಥೆಗೆ ಹೆಚ್ಚಿನ ಶಕ್ತಿಯನ್ನು ನೀಡಿದ್ದರಿಂದ ಇಂದು ಜಾಗತಿಕ ಮಟ್ಟದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಭಾರತದ ವಿಜ್ಞಾನಿಗಳ ಸಾಧನೆ ಅವರ ಕೊಡುಗೆ ಅತ್ಯಂತ ಅಪಾರವಾಗಿದೆ ಎಂದು ಕೊಂಡಾಡಿದರು.

ಪೂಜೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ. ಜನಾರ್ಧನ್, ಎ.ಆನಂದ್, ಈ ಶೇಖರ್, ಜಿ ಪ್ರಕಾಶ್, ಪರಿಸರ ರಾಮಕೃಷ್ಣ, ಪುಟ್ಟರಾಜು, ಉಮೇಶ್, ಚಿನ್ನಿ ಪ್ರಕಾಶ್, ಓಬಳೇಶ್ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net