ಇಸ್ರೇಲ್‌ನಿಂದ ಸುರಕ್ಷಿತವಾಗಿ ದುರ್ಗಕ್ಕೆ ಮರಳಿದ ವಿದ್ಯಾರ್ಥಿ

CTD JABIVULL M.A.---------
Published on

ಚಿತ್ರದುರ್ಗ: ಇಸ್ರೇಲ್-ಇರಾನ್ ಯುದ್ಧದ ಈ ಗಂಭೀರ ಪರಿಸ್ಥಿತಿಯಲ್ಲಿ, ಇಸ್ರೇಲ್‌ನಲ್ಲಿದ್ದ ವಿದ್ಯಾರ್ಥಿ ಚಿತ್ರದುರ್ಗದ ಎಂ.ಎ. ಜಬೀವುಲ್ಲಾ ಅವರು ತಾಯ್ನಡಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.

ನಗರದ ಹೊಳಲ್ಕೆರೆ ರಸ್ತೆ ಬರಗೇರಿ ಬೀದಿಯ ನಿವಾಸಿ ಮೊಹಮ್ಮದ್‌ಮುಸ್ತಕ್ ಅವರ ಪುತ್ರ ಜಬೀವುಲ್ಲಾ, ಉನ್ನತ ಶಿಕ್ಷಣಕ್ಕಾಗಿ ಇಸ್ರೇಲ್‌ಗೆ ತೆರಳಿದ್ದರು. ಅಲ್ಲಿಯ ನೆಗೆವ್ ಬೆನ್‌ಗುರಿಯನ್ ವಿಶ್ವವಿದ್ಯಾಲಯದಲ್ಲಿ ಪರಿಸರ ಕುರಿತಂತೆ ಎಂಎಸ್ಸಿ ಮೈಕ್ರೋ ಬಯಾಲಜಿ ಅಧ್ಯಯನ ಮಾಡುತ್ತಿದ್ದರು.

ಯುದ್ಧದ ಸಂಕಷ್ಟ ಸಂದರ್ಭದಲ್ಲಿ ಸಿಲುಕಿರುವ ಜಬೀವುಲ್ಲಾರನ್ನು ಸುರಕ್ಷಿತವಾಗಿ ಕರೆಸುವಂತೆ ಕುಟುಂಬ ವರ್ಗದವರು ಶಾಸಕ ಕೆ.ಸಿ ವೀರೇಂದ್ರಪಪ್ಪಿ ಅವರಿಗೆ ಮನವಿ ಮಾಡಿದ್ದರು. ಶಾಸಕರು ಹೊಸದಿಲ್ಲಿಯಲ್ಲಿರುವ ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿ ಸುರಕ್ಷಿತವಾಗಿ ಹಿಂತಿರುಗಿ ಕರೆತರುವಂತೆ ಮನವಿ ಮಾಡಿದ್ದರು.

ಭಾನುವಾರ ಜಬೀವುಲ್ಲಾ ಹೊಸದಿಲ್ಲಿಗೆ ತಲುಪಿ,ಕರ್ನಾಟಕದಲ್ಲಿ ಭವನದಲ್ಲಿ ತಂಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಶಾಸಕರು, ತನ್ನನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಸ್ವತಃ ವೆಚ್ಚ ಭರಿಸಿ ಹೊಸದಿಲ್ಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ನಾನು ಚಿತ್ರದುರ್ಗಕ್ಕೆ ತಲುಪಲು ನೆರವಾಗಿದ್ದಾರೆ ಎಂದು ಜಬೀವುಲ್ಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net