ಎರಡು ಇಸ್ಪೀಟ್​ ಅಡ್ಡೆಗಳ ಮೇಲೆ ದಾಳಿ; 16 ಜನ ಪೊಲೀಸರ ವಶಕ್ಕೆ

Crime Logo
Published on

ಹಾವೇರಿ: ಜಿಲ್ಲೆಯ ಎರಡು ಕಡೆ ಇಸ್ಪಿಟ್​ ಆಡುತ್ತಿದ್ದ ತಂಡಗಳ ಮೇಲೆ ದಾಳಿ ನಡೆಸಿದ ಪೊಲೀಸರು 16 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸವಣೂರ ತಾಲೂಕಿನ ಹೆಸರೂರು ಗ್ರಾಮದಲ್ಲಿ 10&11 ಜನರು ಗುಂಪು ಸೇರಿಕೊಂಡು ಇಸ್ಪೀಡ್​ ಆಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 15,200 ರೂ. ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್​ನ ಬಳಿ 5 ಜನರ ತಂಡ ಇಸ್ಪೀಟ್​ ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 26 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net