ಇಸ್ಪೀಟ್​ ಅಡ್ಡೆ ಮೇಲೆ ದಾಳಿ; 8 ಜನರ ವಿರುದ್ಧ ದೂರು ದಾಖಲು

Crime Logo
Published on

ರಾಣೆಬೆನ್ನೂರ: ಇಟ್ಟಿಗೆ ಭಟ್ಟಿ ಬಳಿ ಇಸ್ಪೀಟ್​ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ಬಂಧಿಸಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮಾಕನೂರ ಕ್ರಾಸ್​ ಬಳಿ ಗುರುವಾರ ನಡೆದಿದೆ.

ತಾಲೂಕಿನ ವಡೇರಾಯನಹಳ್ಳಿ ನಿವಾಸಿ ಕರಬಸಪ್ಪ ಚನ್ನಬಸಪ್ಪ ಗೌಡರ (32) ಬಂಧಿತ ಆರೋಪಿ. ಇನ್ನೂ 7 ಜನ ತಲೆಮರಿಸಿಕೊಂಡಿದ್ದಾರೆ.

ಇವರು ಮಾಕನೂರ ಕ್ರಾಸ್​ ಬಳಿ ಇಟ್ಟಿಗೆ ಭಟ್ಟಿಯಲ್ಲಿ ಇಸ್ಪೀಟ್​ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಾರಪಟ್ಟಣ ಠಾಣೆ ಪಿಎಸ್​ಐ ಪ್ರವಿಣಕುಮಾರ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೂಳಿದವರು ಓಡಿ ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net