

ರಾಣೆಬೆನ್ನೂರ: ಜಮೀನಿನಲ್ಲಿ ಅಂದರ್&ಬಾಹರ್ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಬರೋಬ್ಬರಿ 1.71 ಲಕ್ಷ ರೂ. ಜಪ್ತಿ ಮಾಡಿ 13 ಜನರ ವಿರುದ್ಧ ಎ್ಐಆರ್ ದಾಖಲಿಸಿದ ಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಆರೋಪಿಗಳಾದ ಅಷ್ಟಮೂತಿರ್ ಅಶೋಕಪ್ಪ ಓಲೇಕಾರ, ಹನುಮಂತಪ್ಪ ಈರಪ್ಪ ಹೊನ್ನಪ್ಪನವರ, ಕರಬಸಪ್ಪ ಮಲ್ಲೇಶಪ್ಪ ಕಂಬಳಿ, ಹನುಮಂತಪ್ಪ ಹಳ್ಳಳೆಪ್ಪನವರ, ಗಣೇಶ ಹಿತ್ತಲಮನಿ ಸೇರಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರು ಮಾಕನೂರು ಕ್ರಾಸ್ ಬಳಿ ಜಮೀನುವೊಂದರಲ್ಲಿ ಅಂದರ್&-ಬಾಹರ್ ಇಸ್ಪೀಟ್ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕುಮಾರಪಟ್ಟಣ ಠಾಣೆ ಪಿಎಸ್ಐ ಸಂಗೀತಾ ದೊಡ್ಡಮನಿ ಹಾಗೂ ತಂಡದವರು ದಾಳಿ ಮಾಡಿ 1.71 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.