ಹಳ್ಳ ದಾಟುತ್ತಿದ್ದಾತ ನೀರಲ್ಲಿ ಮುಳುಗಿ ಸಾವು?

crime logo
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಒಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.

ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಮಲ್ಲೇಬೋರನಹಟ್ಟಿ ಬಳಿ ಜಿನಿಗಿ ಹಳ್ಳವನ್ನು ದಾಟುವ ವೇಳೆ ವ್ಯಕ್ತಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕೂಡ್ಲಿಗಿ ತಾಲೂಕು ಕರಡಿಹಳ್ಳಿ ಗ್ರಾಮದ ತಿಪ್ಪೇಸ್ವಾಮಿ (27) ಮೃತ ವ್ಯಕ್ತಿ. ಮಲ್ಲೇಬೋರನಹಟ್ಟಿಯ ಹುಡುಗಿಯ ಜತೆ ವಿವಾಹವಾಗಿತ್ತು. ಗುರುವಾರ ಸಂಜೆ ಘಟನೆ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.

ಸಾವಿನ ಕುರಿತು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದು, ನಾಯಕನಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಪಘಾತದಲ್ಲಿ ಇಬ್ಬರಿಗೆ ಗಾಯ

ಹಿರಿಯೂರು ತಾಲೂಕು ಐಮಂಗಲ ಗ್ರಾಮದ ಎಚ್.ಡಿ.ಪುರ ರಸ್ತೆಯ ನಾಡಕಚೇರಿ ಮುಂಭಾಗ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಗಾಯಗೊಂಡಿದ್ದಾರೆ.

ಕಡೂರು ತಾಲೂಕು ಸಣ್ಣೇನಹಳ್ಳಿಯ ಮಂಜಪ್ಪ, ಹೊಸದುರ್ಗದ ಮಮತಾ ಗಾಯಗೊಂಡವರು. ಐಮಂಗಲದ ಪರಿಚಿತರ ಮನೆಯ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದಾಗ ಪ್ಯಾಸೆಂಜರ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net