ಇಸ್ಕಾನ್ ನಲ್ಲಿ ಜನ್ಮಾಷ್ಟಮಿ ವೈಭವ, ಬೆಳಗಿನ ಜಾವದಿಂದಲೇ ಶ್ರೀಕೃಷ್ಣ ಸ್ಮರಣೆ ಆರಂಭ, ಭಕ್ತರಿಂದ ತರಹೇವಾರಿ ಭಕ್ಷ್ಯ ಸಮರ್ಪಣೆ

02-3.jpg
Published on

ಹುಬ್ಬಳ್ಳಿ: ಧಾರವಾಡದ ರಾಯಾಪುರದಲ್ಲಿರುವ ಇಸ್ಕಾನ್ ನಲ್ಲಿ ಶ್ರೀ ಕಷ್ಣನ ಜನ್ಮದಿನವನ್ನು ಗುರುವಾರ ಅತ್ಯಂತ ವೈಭವದಿಂದ ಆಚರಿಸಲಾಯಿತು.

ಬೆಳಗಿನ 4.30ಕ್ಕೆ ಮಂದಿರಕ್ಕೆ ಆಗಮಿಸಿದ ನೂರಾರು ಭಕ್ತರು ಕೃಷ್ಣನ ಜನ್ಮದ ಸ್ಮರಣೆಯಲ್ಲಿ ತೊಡಗಿದರು. ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕೂರ ಅವರು ಸಂಯೋಜಿಸಿದ ಶ್ರೀ ಗುರುವಷ್ಟಕದೊಂದಿಗೆ ವಿಗ್ರಹಗಳಿಗೆ ವೈಭವಯುತ ಮಂಗಳಾರತಿ ನಡೆಯಿತು.

ಅರ್ಚನೆ ಮತ್ತು ಇತರ ಸೇವೆಗಳು 8.30ಕ್ಕೆ ಆರಂಭವಾದವು. ಭಕ್ತರು ತಯಾರಿಸಿದ 108 ವಿವಿಧ ಬಗೆಯ ಭಕ್ಷ್ಯಗಳನ್ನು ಶ್ರೀಕಷ್ಣ ಬಲರಾಮರಿಗೆ ನೈವೇದ್ಯ ಮಾಡಲಾಯಿತು. ಶುದ್ಧ ತುಪ್ಪದಿಂದ ತಯಾರಿಸಲಾದ 151 ಕಿಲೋ ಬೃಹತ್ ಲಡ್ಡುವನ್ನು ಭಗವಂತನಿಗೆ ಸಮಪಿರ್ಸಿದ್ದು ವಿಶೇಷವಾಗಿತ್ತು.

ನಗರದ ಭೈರು ಕೇಟರರ್ಸ್ ನ ಬಾಬುಲಾಲ ಪ್ರಜಾಪತಿ ಅವರು ಈ ಲಡ್ಡು ತಯಾರಿಸಿ ಸಮರ್ಪಿಸಿದರು.

ಆಚಾರ್ಯರು ರಚಿಸಿದ ವಿವಿಧ ಭಕ್ತಿ ಗೀತೆಗಳನ್ನು ಭಕ್ತರು ಹಾಡಿದರು.
ಧಾರವಾಡದ ಯಗಾನ ಮತ್ತು ಸಂಸತಿ ಸಂದ ವತಿಯಿಂದ ಕವಿ ಗುಂಡು ಸೀತಾರಾಮರಾವ್ ಅವರ ಕಂಸವಧೆ ಯಗಾನ ಪ್ರದರ್ಶನಗೊಂಡಿತು.

ಮಯೂರ ನೃತ್ಯ ಅಕಾಡೆಮಿಯ ಹೇಮಾ ವಾಗ್ಮೋಡೆ ಹಾಗೂ ಸಂಗಡಿಗರು ಮತ್ತು ನಾಟ್ಯಾಂಜಲಿ ಕಲಾಕೇಂದ್ರದ ವಿದುಷಿ ಸಹನಾ ಭಟ್ ಹಾಗೂ ಸಂಗಡಿಗರು ನೃತ್ಯರೂಪಕ ನಡೆಸಿಕೊಟ್ಟರು.

ಮಹಾಭಿಷೇಕವನ್ನು ಶಂಖನಾದದೊಂದಿಗೆ ಆರಂಭಿಸಲಾಯಿತು. ಸ್ವರ್ಣ ಪೀಠದ ಮೇಲೆ ವಿಗ್ರಹಗಳನ್ನು ಸ್ಥಾಪಿಸಿ ವಿವಿಧ ಬಗೆಯ ಉಪಚಾರಗಳನ್ನು ಸಮಪಿರ್ಸಲಾಯಿತು. ನಂತರ ವಿಗ್ರಹಗಳಿಗೆ ಗಂಧದ ಎಣ್ಣೆಯನ್ನು ಪೂಸಲಾಯಿತು.

ಸ್ನಾನ ಮುಂತಾದವುಗಳಿಂದ ನೆರವೇರಿಸಲಾದ ಮಹಾಭಿಷೇಕವು ಬೆಳಗ್ಗೆ 11.30ಕ್ಕೆ ಸಮಾರೋಪಗೊಂಡಿತು.

ಹುಬ್ಬಳ್ಳಿ- ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ಇವರು ಶ್ರೀಕಷ್ಣನ ಅವತಾರ ಮತ್ತು ಅವನ ಲೀಲೆಗಳ ಕುರಿತು ಪ್ರವಚನ ನೀಡಿದರು.

ಮಧ್ಯರಾತ್ರಿಯವರೆಗೂ ವಿವಿಧ ಆಚರಣೆಗಳು ನಡೆದವು. ಇಡೀದಿನ ಉಪವಾಸ ವ್ರತ ಆಚರಿಸಿದ ಭಕ್ತರಿಗೆ ಕಾಳುಗಳು, ಹಾಲು-ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸದೇ ತಯಾರಿಸಲಾದ ಅನುಕಲ್ಪ ಪ್ರಸಾದ ನೀಡಲಾಯಿತು. ಇತರ ಭಕ್ತರಿಗೆ ಸ್ವಾದಿಷ್ಟ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net