16 ರಂದು ಇಸ್ಕಾನ್ ಶ್ರೀ ಜಗನ್ನಾಥ ರಥಯಾತ್ರೆ

 ಇಸ್ಕಾನ್ ಕುಡುಪುಕಟ್ಟೆ
ಇಸ್ಕಾನ್ ಕುಡುಪುಕಟ್ಟೆ
Published on

ಪ್ರಮುಖ ಮುಖ್ಯಾಂಶಗಳು

  • ಲೇಡಿಹಿಲ್ ನಾರಾಯಣಗುರು ವೃತ್ತದಿಂದ ರಥಯಾತ್ರೆ
  • ದೇಶ-ವಿದೇಶಗಳ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
ಮಂಗಳೂರು: ಜಗನ್ನಾಥ ರಥಯಾತ್ರೆಯು ವಿಶ್ವವಿಖ್ಯಾತವಾಗಿದ್ದು, ಅದರಲ್ಲೂ ಒಡಿಶಾ ಪುರಿ ಶ್ರೀ ಜಗನ್ನಾಥ ರಥಯಾತ್ರೆಯು ಪ್ರಸಿದ್ಧಿ ಗಳಿಸಿದೆ. ಅದೇ ರೀತಿಯಲ್ಲಿ ಕುಡುಪುಕಟ್ಟೆಯಲ್ಲಿರುವ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ವತಿಯಿಂದ ಮಂಗಳೂರಿನಲ್ಲಿ ಜಗನ್ನಾಥ ರಥಯಾತ್ರೆಯು ಜು. 16 ರಂದು ನಡೆಯಲಿದೆ ಎಂದು ಇಸ್ಕಾನ್ ಕುಡುಪುಕಟ್ಟೆ ಮ್ಯಾನೇಜ್‌ಮೆಂಟ್ ಸಮಿತಿಯ ಸದಸ್ಯ ಪ್ರೇಮಭಕ್ತಿ ದಾಸ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
16 ರಂದು ಅಪರಾಹ್ನ 3.30ಕ್ಕೆ ಲೇಡಿಹಿಲ್ ನಾರಾಯಣಗುರು ವೃತ್ತದಿಂದ ರಥಯಾತ್ರೆ ಆರಂಭಗೊಂಡು ಲಾಲ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ಕ್ಲಾಕ್ ಟವರ್ ಆಗಿ ಸಂಜೆ 5.30ಕ್ಕೆ ಪುರಭವನ ತಲುಪಲಿದೆ. ಪುರಭವನದಲ್ಲಿ ಪ್ರಸಾದ ವಿತರಣೆ, ಸಾಂಸ್ಕೃತಿಕ, ಯುವ ಸಬಲೀಕರಣ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕ ಭಕ್ತರಿಗೂ ರಥವನ್ನು ಎಳೆಯಲು ಅವಕಾಶ ಮಾಡಿಕೊಡಲಾಗುವುದು ಎಂದವರು ತಿಳಿಸಿದರು.
ರಥಯಾತ್ರೆಯಲ್ಲಿ ದೇಶ-ವಿದೇಶಗಳ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದ್ಘಾಟನಾ ಸಮಾರಂಭದಲ್ಲಿ ಇಸ್ಕಾನ್‌ನ ಹಿರಿಯ ಸಂತರರು, ಮಂಗಳೂರಿನ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಇಸ್ಕಾನ್ ಕುಡುಪುಕಟ್ಟೆ ಸಮಿತಿಯ ಸದಸ್ಯರಾದ ದೇವಧರ್ಮ ದಾಸ, ಉದ್ಭವ ಪ್ರಾಣಕೃಷ್ಣ ದಾಸ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net