ಸೆ. 6,7ರಂದು ಇಸ್ಕಾನ್ ಶ್ರೀಕೃಷ್ಣ ಜನ್ಮಾಷ್ಟಮಿ, 2, 3ರಂದು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಉತ್ಸವ ಆಯೋಜನೆ

astami
Published on

ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ(ಇಸ್ಕಾನ್) ಮಂಗಳೂರು ಶಾಖೆ, ಸೆಪ್ಟಂಬರ್ 6, 7ರಂದು ಕೊಡಿಯಾಲ್‌ಬೈಲ್‌ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಿದೆ ಎಂದು ಸಂಸ್ಥೆಯ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹೋತ್ಸವ ಅಂಗವಾಗಿ ಸೆ.2, 3ರಂದು ದೇವಾಲಯದ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಭರತನಾಟ್ಯ, ಪ್ರಬಂಧ, ಭಜನೆ, ಚಿತ್ರಕಲೆ ಮತ್ತು ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗುವುದು.ಎರಡು ಅನಾಥಾಶ್ರಮದ ಮಕ್ಕಳಿಗೆ ವಿಶೇಷ ಆಮಂತ್ರಣ ನೀಡಿ ಪ್ರಸಾದ ನೀಡುವ ಕಾರ್ಯಕ್ರಮ ಇದೆ. ಭಕ್ತರು ಹರಿನಾಮ ಜಪ ಮಂತ್ರ ಜಪಿಸಿ 108 ಹೆಜ್ಜೆಗಳನ್ನು ದಾಟುವ ಕಾರ್ಯಕ್ರಮಕ್ಕೆ ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಮಥುರಾ ನಗರದಿಂದ ತರಿಸಲ್ಪಟ್ಟ ರಕ್ಷಾಬಂಧನವನ್ನು ಭಕ್ತರಿಗೆ ನೀಡಲಾಗುವುದು ಎಂದರು.

ಸೆ.6ರಂದು ಬೆಳಗ್ಗೆ 7ಕ್ಕೆ ಶೃಂಗಾರ, ಅಲಂಕಾರ ಪೂಜೆ, 8ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, 9ಕ್ಕೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಸಂಜೆ 4ಕ್ಕೆ ಭಜನೆ, 6ಕ್ಕೆ ಅಭಿಷೇಕ, 8.15ಕ್ಕೆ ಮಹಾಪೂಜೆ ನಡೆಯಲಿದೆ. ಸೆ.7ರಂದು ಬೆಳಗ್ಗೆ 7ಕ್ಕೆ ಶೃಂಗಾರ, ಅಲಂಕಾರ ಪೂಜೆ, 8ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, 9ಕ್ಕೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಭಜನೆ, 9ಕ್ಕೆ ಮಹಾಭಿಷೇಕ, ಮಧ್ಯರಾತ್ರಿ 12ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಭಕ್ತರು ಹೂವು, ಹಣ್ಣು, ತೆಂಗಿನಕಾಯಿ, ತುಳಸಿ ಅರ್ಪಿಸಬಹುದು ಎಂದು ಮಾಹಿತಿ ನೀಡಿದರು. ಇಸ್ಕಾನ್ ಮಂಗಳೂರು ಕಾರ್ಯದರ್ಶಿ ಸನಂದನದಾಸ, ಜತೆ ಕಾರ್ಯದರ್ಶಿ ಸುಂದರಗೌರ ದಾಸ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net