ಈಶ್ವರಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಹಿರಿಯರ ದಿನಾಚರಣೆ

03GDG08
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಅವರು, ಜೀವನದಲ್ಲಿ ದೊಡ್ಡ ಹುದ್ದೆ, ಆಸ್ತಿ, ಸಂಪತ್ತು ಎಲ್ಲವನ್ನೂ ಗಳಿಸಬಹುದು. ಆದರೆ, ನಾನೆಷ್ಟು ಖುಷಿ ಆಗಿದ್ದೇನೆ ಎಂಬುದು ಮುಖ್ಯವಾಗುತ್ತದೆ. ನೆಮ್ಮದಿ, ಖುಷಿಗಿಂತಲೂ ದೊಡ್ಡ ಆಸ್ತಿ ಬೇರೊಂದಿಲ್ಲ. ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಖುಷಿ, ಸಂತೋಷದಲ್ಲಿರಬೇಕು. ಶಾರೀರಿಕ ಮತ್ತು ಮಾನಸಿಕ ಆರೋಗ್ಯವಂತ ಆಗಿರಬೇಕು. ಹಿಂದಿನ ಕಾಲದಲ್ಲಿ ಯೋಗಿಗಳು, ಶಿಸ್ತುಬದ್ಧ ಜೀವನ ಇಟ್ಟುಕೊಂಡಿದ್ದರು. ನೂರು ವರ್ಷ ಬದುಕುತ್ತಿದ್ದರು. ಆದರೆ ವರ್ತಮಾನದಲ್ಲಿ ಜೀವನಶೈಲಿಯ ಬದಲಾವಣೆಯಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.
ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ಅವರು ಮಾತನಾಡಿ, ನೀವು ಶರೀರವನ್ನು ಆರೈಕೆ ಮಾಡುವಂತೆ, ಆತ್ಮವನ್ನು, ಮನಸ್ಸನ್ನು ಬ್ರಹ್ಮಕುಮಾರಿ ವಿವಿ ಆರೈಕೆ ಮಾಡುತ್ತದೆ. ಶರೀರದ ಆರೋಗ್ಯಕ್ಕೆ ಊಟ, ವ್ಯಾಯಾಮ, ಶುದ್ಧ ಗಾಳಿ, ವಾಕಿಂಗ್​ ಮಾಡುವಂತೆ, ಆಧ್ಯಾತ್ಮಿಕ ಆರೋಗ್ಯಕ್ಕೆ ಆಹಾರದ ರೂಪದಲ್ಲಿ ಅಧ್ಯಾತ್ಮ ಜ್ಞಾನ ಅವಶ್ಯವಿದೆ ಎಂದರು.
ಡಾ. ಮಹೇಶ ಹೇಮಾದ್ರಿ, ಡಿ. ಆರ್​. ಪಾಟೀಲ್​, ಡಿ.ಎನ್​. ಮೂಲಿಮನಿ, ಡಾ. ನೀಲಗುಂದ ಎಸ್​.ಎಸ್​. ಬಿ.ಬಿ ಹೂಗಾರ್​ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net