ಉದ್ಘಾಟನೆಗೆ ಸಜ್ಜಾಗಿರುವ ಈಶ್ವರ ದೇಗುಲ

21-kkr1(2-24
ಕಿಕ್ಕೇರಿ ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಈಶ್ವರ ದೇಗುಲ.
Published on

ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿ ಈಶ್ವರ ದೇಗುಲ ಉದ್ಘಾಟನೆಗೊಳ್ಳಲು ಸಜ್ಜಾಗಿದೆ.

ಫೆ.22ರಂದು ನಡೆಯುವ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ಟಿ.ಮಂಜು ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ದೇಗುಲ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಶಿವಮೊಗ್ಗ ಶಾಸಕ ರುದ್ರೇಗೌಡ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಗ್ರಾಪಂ. ಅಧ್ಯಕ್ಷೆ ಎಲ್.ಪಿ. ಮಹಾಲಕ್ಷ್ಮೀ ವಿಶ್ವನಾಥ್, ಸದಸ್ಯ ಕಡಹೆಮ್ಮಿಗೆ ರಮೇಶ್, ಕುಮಾರಿ ಧನಂಜಯ, ಮನ್ಮುಲ್ ಡಾಲು ರವಿ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ಕೆಪಿಸಿಸಿ ಸದಸ್ಯ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡ ಭಾಗವಹಿಸಲಿದ್ದಾರೆ.

ಫೆ.22 ಮತ್ತು 23ರಂದು ಭಜನೆ, ವೀರಗಾಸೆ, ಕೋಲಾಟ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪೂಜಾ ಕೈಂಕರ್ಯದಲ್ಲಿ ಪುಣ್ಯಾಹ್ನ ವಾಚನ, ದೇವನಂದಿ ಕಂಕಣಧಾರೆ, ಕೃಚ್ಛಾರಣೆ, ಗೋಪೂಜೆ, ಮಹಾ ಸಂಕಲ್ಪ, ಗ್ರಾಮ, ಸಭಾ ಪೂಜೆ, ವೇದಪಾರಾಯಣ, ಕಳಶ ಪೂಜೆ, ರಾಕ್ಷೋಘ್ನ, ದೀಕ್ಷಕಾಲ ಬಲಿ, ಆದಿವಾಸ ಬಂಧಶುದ್ಧ, ಪರಿವಾರ, ವಾಸ್ತು, ರುದ್ರ, ಕಲಾ, ಅಘೋರ ರುದ್ರ ಹೋಮ, ಪ್ರಸಾದ ವಾಸ್ತು ಪೂಜೆ, ಪ್ರತಿಷ್ಠಾಪನಾ ನಿರೀಕ್ಷಣಾ ಪ್ರತಿಷ್ಠಾಪನೆ, ಪರಿವಾರ ಹೋಮ, ವಿಮಾನಗೋಪುರ ಪ್ರತಿಷ್ಠಾಪನಾ ಕಲಶಾಭಿಷೇಕ, ಮಹಾ ಪೂಣಾಹುತಿ, ರಾಜಾರ್ಶೀವಾದ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net