

ಮಡಿವಾಳ: ಮಾಲೂರು ತಾಲೂಕು ತೋರ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಳ್ಳಾವಿ ಗ್ರಾಮದ ಶ್ರೀಮದ್ ಬೆಳ್ಳನಪುರಿ ವೀರ ಸಿಂಹಾಸನ ಸಂಸ್ಥಾನ ಮಠದಲ್ಲಿ ಜು.26ರಂದು ಶ್ರೀ ವೀರಭದ್ರಸ್ವಾಮಿ ಸೇನಾ ಸಮಿತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ, ಶ್ರೀ ಮಹಂತ ಸ್ವಾಮೀಜಿ ಅವರ 39ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ 53ನೇ ಜನ್ಮದಿನೋತ್ಸವ ಆಯೋಜಿಸಲಾಗಿದೆ ಎಂದು ಬೆಳ್ಳನಪುರಿ ವೀರ ಸಿಂಹಾಸನ ಸಂಸ್ಥಾನ ಮಠದ ಮಹಂತ ಸ್ವಾಮೀಜಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ನಾಡಿನ ಹರ, ಗುರು, ಚರ ಮೂರ್ತಿಗಳು, ರಾಜಕೀಯ ಪ್ರತಿನಿಧಿಗಳು, ಸಾಹಿತಿಗಳು, ವಿದ್ವಾಂಸರು, ಜ್ಯೋತಿಷಿಗಳು, ಧಮಾರ್ಭಿಮಾನಿಗಳು ಆಗಮಿಸಲಿದ್ದಾರೆ.
ಶ್ರೀಮದ್ ರಂಭಾಪುರಿ ಪೀಠ, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶ ಸ್ವಾಮೀಜಿ ಅವರಿಂದ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಮಧ್ಯಾಹ್ನ ಧರ್ಮಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ರಂಭಾಪುರಿ ವೀರ ಸಿಂಹಾಸನನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಕುಣಿಗಲ್ ತಾಲೂಕು ಎಡೆಯೂರಿನ ರೇಣುಕ ಸ್ವಾಮೀಜಿ, ಬಳ್ಳನಪುರದ ಶ್ರೀ, ತಮಿಳುನಾಡು ಪಟ್ಟದ ರಾಜೇಶ್ವರ ಸ್ವಾಮೀಜಿ, ರಾಜಾಪುರ ಸಂಸ್ಥಾನ ಮಠ, ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಗಳು ಹುಣಸೇಮಾರನಹಳ್ಳಿ ಸಂಸ್ಥಾನ ಮಠದ ಶ್ರೀಗಳು ಭಾಗವಹಿಸಲಿದ್ದಾರೆ.
ಎಂಎಲ್ಸಿ ಗೋವಿಂದರಾಜು, ಎಚ್.ಬಸವರಾಜೇಂದ್ರ, ಐಎಎಸ್ ಅಧ್ಯಕ್ಷ ಕ.ರಾ. ಪ.ಮತ್ತು ಮಂಡಳಿ ಶ.ಐ.ನಾಗರಾಜ ಶಾಸ್ತ್ರೀ, ದರಖಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ, ಕೃಷಿಕ ಸಮಾಜ ಉಪಾಧ್ಯಕ್ಷ ಬಿ.ವಿ.ಪಾಪಣ,್ಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷಿ$್ಮನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ ಮಧುಸೂದನ್, ಪುರಸರಸಭಾ ಸದಸ್ಯ ಎಂ.ವಿ.ವೇಮನ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ. ವಿಜಯನರಸಿಂಹ, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮಣ್ಣ, ಡಾ.ಸಿ. ಸೋಮಶೇಖರ ಭಾಗವಹಿಸಲಿ ಎಂದು ತಿಳಿಸಿದರು.