

ವಿಜಯವಾಣಿ ಸುದ್ದಿಜಾಲ ಉಡುಪಿ
ಈಶ ಫೌಂಡೇಷನ್ನಿಂದ ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವದಫೈನಲ್ ಪಂದ್ಯಗಳು ಸೆ.21ರಂದು ಕೊಯಂಬತ್ತೂರಿನಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಆ.24ರಂದು ಉಡುಪಿಯ ಸೇಂಟ್ ಸಿಸಿಲೀಸ್ ಹೈಸ್ಕೂಲ್ ಗ್ರೌಂಡ್ನಲ್ಲಿ ಉಡುಪಿ ಜಿಲ್ಲಾ ಕ್ಲಸ್ಟರ್ ಮಟ್ಟದ ಗ್ರಾಮೋತ್ಸವ ರೂರಲ್ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸ್ವಯಂ ಸೇವಕ ಸಭ್ಯತ್ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಆ.18ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋ ಬಾಲ್ ಪಂದ್ಯಾವಳಿ ನಡೆಯಲಿದೆ. ಗ್ರಾಮೀಣ ತಂಡಗಳಿಗೆ ಮಾತ್ರ ಅವಕಾಶವಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈಗಾಗಲೇ 40 ವಾಲಿಬಾಲ್ ತಂಡ ಹಾಗೂ 20 ಥ್ರೋ ಬಾಲ್ ತಂಡ ನೋಂದಾಯಿಸಿದೆ ಎಂದರು.
ಕರ್ನಾಟಕದ 15 ಜಿಲ್ಲೆಗಳ 18 ಕ್ಲಸ್ಟರ್ಗಳ ವಿಭಾಗ ಮಟ್ಟದ ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿ (ತಲಾ 9 ಕ್ಲಸ್ಟರ್) ನಡೆಯಲಿದೆ. ಉಡುಪಿಯ ಕೆರಾಡಿಯಲ್ಲಿ ವಿಭಾಗ ಮಟ್ಟದ ಕ್ರೀಡೆ ನಡೆಯಲಿದೆ. ಇಲ್ಲಿ ಗೆದ್ದವರು ಕೊಯಂಬತ್ತೂರಿನಲ್ಲಿ ನಡೆಯವಫೈನಲ್ ಪಂದ್ಯಗಳಿಗೆ ಆಯ್ಕೆಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ನ ಸ್ವಯಂ ಸೇವಕರಾದ ಅಮಿತಾ ಭಟ್, ಹರಿಣಿ ಶೆಟ್ಟಿ, ಸಜ್ಜನ್ ಹೆಗ್ಡೆ ಇದ್ದರು.
ಮೊದಲನೇ ಹಂತದ (ಕ್ಲಸ್ಟರ್) ಪಂದ್ಯದಲ್ಲಿ ಗೆದ್ದವರಿಗೆ ಪ್ರಥಮ 10 ಸಾವಿರ ರೂ., ದ್ವೀತಿಯ 7, ತೃತೀಯ 5 ಹಾಗೂ ಚತುರ್ಥ 4 ಸಾವಿರ ರೂ. ಬಹುಮಾನವಿದೆ. ವಿಭಾಗ ಮಟ್ಟದಲ್ಲಿ ವಿಜೇತರಾದವರಿಗೆ ಕ್ರಮವಾಗಿ 12 ಸಾವಿರ ರೂ., 8, 6 ಹಾಗೂ 4 ಸಾವಿರ ರೂ. ಬಹುಮಾನವಿದೆ. ಅಂತಿಮ ಪಂದ್ಯದಲ್ಲಿ ವಿಜೇತರಾಗುವ ತಂಡಕ್ಕೆ ತಲಾ 5 ಲಕ್ಷ ರೂ. ಬಹುಮಾನ ಹಾಗೂ ಶೀಲ್ಡ್ ನೀಡಲಾಗುತ್ತಿದೆ ಎಂದು ತಿಳಿಸಿದರು. 14 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರೂ ಗ್ರಾಮೋತ್ಸವದಲ್ಲಿ ಪಾಳ್ಗೊಳ್ಳಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದು ಸದ್ಗುರು ಅವರ ಸಂಕಲ್ಪವಾಗಿದೆ. ನೋಂದಣಿ ಉಚಿತವಾಗಿದೆ. ಮಾಹಿತಿಗಾಗಿ ಮೊ.ಸಂ. 8300030999 ಸಂಪರ್ಕಿಸಬಹುದು ಎಂದರು.