

ಮಂಗಳೂರು : ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ (ಇಸ್ಕಾನ್) ಮಂಗಳೂರು ಕೊಡಿಯಾಲ್‌ಬೈಲ್ ಶಾಖೆಯ ವತಿಯಿಂದ ಗೋವರ್ಧನ ಪೂಜಾ ಮತ್ತು ಗೋ ಪೂಜಾ ನಗರದ ಪಿವಿಎಸ್ ಕಲಾಕುಂಜ ಆವರಣದಲ್ಲಿ ನಡೆಯಿತು.
ಸಂಸ್ಥೆಯ ಆರ್ಚಕ ದೀನದಯಾಳ್ ಪ್ರಭು ಪುರೋಹಿತ್ವದಲ್ಲಿ ತುಳಸಿ ಪೂಜೆ,ಸಂಧ್ಯಾರತಿ ನೆರವೇರಿತು. ಸಂಸ್ಥೆಯ ಮುಖ್ಯಸ್ಥ ಶ್ರೀ ಗುಣಾಕರ ರಾಮದಾಸ ನೇತ್ರತ್ವದಲ್ಲಿ ಗೋಪೂಜೆ ಮತ್ತು ಗೋವರ್ಧನ ಪೂಜೆ ನೆರವೇರಿತು.
ಹಿಂದು ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದ್ದು ಪೂಜನೀಯ ಭಾವದಿಂದ ಗೌರವಿಸಲಾಗುತ್ತದೆ ಎಂದು ಅವರು ಹೇಳಿದರು.ಶೇಷ ಆಕರ್ಷಣೆಯಾಗಿ120 ಕೆ.ಜಿ. ತೂಕದ ಗೋವರ್ಧನ ಬೆಟ್ಟವನ್ನು ಹೋಲುವ ಸಸ್ಯಹಾರಿ ವರ್ಣಮಯ ಕೇಕ್ ಪ್ರದರ್ಶಿಸಲಾಯಿತು. ಭಕ್ತರು ಪ್ರಸಾದ ಸ್ವೀಕರಿಸಿದರು. ಪೂಜಾ ವಿಧಿ ವಿಧಾನ ಸನಾತನ ದಾಸ ಮತ್ತು ಸುಂದರ
ಗೌರದಾಸ ನೇತೃತ್ವದಲ್ಲಿ ನಡೆಯಿತು.