

ಮಂಗಳೂರು : ನಗರದ ಕೊಡಿಯಾಲ್‌ಬೈಲ್‌ನ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಂಸ್ಥೆಯ ಮುಖ್ಯಸ್ಥ ಶ್ರೀಗುಣಾಕರ ರಾಮದಾಸ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಶ್ರೀಕೃಷ್ಣನ ಬೆಳ್ಳಿಯ ವಿಗ್ರಹಕ್ಕೆ ನೂತನ ವಸ್ತ್ರವಿನ್ಯಾಸ, ಆಭರಣ ಮತ್ತು ಕಿರೀಟದಿಂದ ಅಲಂಕರಿಸಲಾಗಿತ್ತು.
ಮುಖ್ಯ ಅರ್ಚಕ ಶ್ರೀ ದೇವಕಿತನಯ ದಾಸ ಅವರು ಶ್ರೀಕೃಷ್ಣನಿಗೆ ಅಲಂಕಾರ ಮತ್ತು ಶೃಂಗಾರ ಪೂಜೆ ನೆರವೇರಿಸಿದರು.
ಶಾಲಾ ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ದೆ, ಪ್ರಬಂಧ, ಚಿತ್ರಕಲೆ, ಭರತನಾಟ್ಯ ಮತ್ತು ಭಜನೆ ಸ್ಪರ್ಧೆ ಜರಗಿತು. ಸಾಯಂಕಾಲ ಕೀರ್ತನೆ, ಧಾರ್ಮಿಕ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪೂಜಾ ವಿಧಿ ವಿಧಾನ ಸನಾತನ ದಾಸ ಮತ್ತು ಸುಂದರ ಸುಂದರ ಗೌರದಾಸ ನೇತೃತ್ವದಲ್ಲಿ ನಡೆಯಿತು.