ತುಂಗಭದ್ರ ಮಂಡಳಿ ಜೀವಂತವಾಗಿದೆಯೇ: ಉಗ್ರಪ್ಪ ಪ್ರಶ್ನೆ

23 HPT 1 UGRAPPA
Published on

ಪ್ರತೀ ವರ್ಷ ೨೦೦ ಟಿಎಂಸಿ ನೀರು ಪೋಲು
ಹೂಳೆತ್ತುವ ಬಗ್ಗೆ ಮಂಡಳಿ ನಿಲುವೇನು?

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ಸುಮಾರ ೩೩ ಟಿಎಂಸಿಯಷ್ಟು ಹೂಳು ತುಂಬಿಕೊAಡಿದೆ. ಪ್ರತೀ ವರ್ಷ ೨೦೦ಕ್ಕೂ ಹೆಚ್ಚು ನೀರು ವ್ಯತ್ಯರ್ಥವಾಗಿ ಸಮುದ್ರ ಪಾಲಾಗುತ್ತಿದೆ. ನೀರಿನ ಸದ್ಬಳಕೆ ಕುರಿತು ಕೇಂದ್ರ ಹಾಗೂ ಜಲಾಶಯದ ಪಾಲುದಾರಿಕೆ ರಾಜ್ಯಗಳ ಗಮನ ಸೆಳೆಯುವಲ್ಲಿ ತುಂಗಭದ್ರ ಮಂಡಳಿ ತನ್ನ ಜವಾಬ್ದಾರಿ ಮರೆತಿದ್ದು, ಬೋರ್ಡ್ ಜೀವಂತವಾಗಿರುವ ಬಗ್ಗೆ ಸಂಶಯ ಕಾಡುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನದಿ ಈ ಭಾಗದ ಜೀವನಾಡಿಯಾಗಿದೆ. ೧೦೦ ಅಡಿ ಸಂಗ್ರಹ ಸಾಮರ್ಥ್ಯ ತೋರುವ ತುಂಗಭದ್ರ ಮಂಡಳಿ, ಅದರಲ್ಲಿನ ಹೂಳೆತ್ತುವ ಬಗ್ಗೆ ಎಂದೂ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. ಹಾಗಾದರೆ, ಮಂಡಳಿಯ ಕಾರ್ಯದರ್ಶಿ, ಹತ್ತಾರು ಇಂಜಿನಿಯರ್‌ಗಳು ಹಾಗೂ ನೂರಾರು ಸಿಬ್ಬಂದಿ ಕೇವಲ ಸಂಬಳ ಪಡೆಯಲು, ಟಿಎ, ಡಿಎ ಬಿಲ್ ಎತ್ತುವುದಕ್ಕೆ ಸೀಮಿತವೇ ಎಂದು ತರಾಟೆಗೆ ತೆಗೆದುಕೊಂಡರು.
ತುAಗಭದ್ರ ಜಲಾಶಯದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಫಲಾನುಭವಿಯಾಗಿದ್ದು, ೮ ಜಿಲ್ಲೆಗಳ ಜನರು ಇದರ ಲಾಭ ಪಡೆಯುವರು. ಆಯಾ ರಾಜ್ಯಗಳು ಮತ್ತು ಕೇಂದ್ರ ಪ್ರತಿನಿಧಿಗಳೂ ಮಂಡಳಿಯ ಸದಸ್ಯರಾಗಿರುತ್ತಾರೆ. ಜಲಾಶಯದಲ್ಲಿನ ಹೂಳಿನ ಸಮಸ್ಯೆ ಕುರಿತು ಮಂಡಳಿ ಸದಸ್ಯರು ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಬೇಕು. ದಶಕಗಳು ಕಳೆದರೂ ಸಮಸ್ಯೆ ಬಗೆಹರಿಯದಿದ್ದರೆ ಅಮೂಲ್ಯವಾದ ನೀರು ಪೋಲಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಬಗ್ಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಜೊತೆಗೆ ವಿಜಯನಗರ, ಬಳ್ಳಾರಿ ಸೇರಿದಂತೆ ೮೦೦ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಭಾಗದ ಬರ ಪೀಡಿತ ಪ್ರದಶಗಳಿಗೆ ನೀರು ಹರಿಯಲಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಪೋಲಾಗುವುದನ್ನು ತಡೆಯಲು ತುಂಗಭದ್ರ ಮಂಡಳಿ ಚಿಂತನೆ ನಡೆಸಬೇಕು.
ಕೇಂದ್ರ ಸರ್ಕಾರ ನೀರನ್ನು ರಾಷ್ಟಿçÃಯ ಸಂಪತ್ತು ಎಂದು ಘೋಷಿಸಬೇಕು. ಜತೆಗೆ ತುಂಗಭದ್ರಾ ಜಲಾಶಯವನ್ನು ರಾಷ್ಟಿçÃಯ ಯೋಜನೆಯನ್ನಾಗಿ ಘೋಷಿಸಿ, ಅಗತ್ಯ ನೆರವು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಗುಜ್ಜಲ ನಾಗರಾಜ್ ಜೊತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net