

ಕೋಲಾರ: ಸಹಕಾರ ರಂಗದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆದರೆ, ಕೋಲಾರ ಜಿಲ್ಲೆಗೆ ಮಾತ್ರ ಪ್ರತ್ಯೇಕ ಕಾನೂನು, ನಡವಳಿ ಇದ್ದಹಾಗೆ ಇದೆ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಇಲಾಖೆ, ಕೋಮುಲ್, ಡಿಸಿಸಿ ಬ್ಯಾಂಕ್, ಟಿಎಪಿಸಿಎಂಎಸ್ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇಲಾಖೆಯ ಪ್ರಗತಿಯೂ ಹೇಳಿಕೊಳ್ಳುವಷ್ಟಾಗಿಲ್ಲ, 2017&-18ರಲ್ಲಿ ವಿತರಣೆ ಮಾಡಿರುವ ಮಹಿಳಾ ಸಂಘಗಳ ಸಾಲ ಮರುಪಾವತಿಯಾಗಿಲ್ಲ, ಆಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಬ್ಯಾಂಕ್ ಗೌರವ ಉಳಿದಿರೋದು ಎಂದರು.
ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ಸ್ಪರ್ಧಿಸುವ ಅಭ್ಯರ್ಥಿಗಳ ಹಾಗೂ ಹಿಂದಿನ ಚುನಾವಣೆಗಳಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಸ್ತಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಈ ರೀತಿ ಮಾಡಿದಾಗ ವಿತರಣೆ ಮಾಡಿರುವ ಸಾಲ ವಸೂಲಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಎಂಪಿಸಿಎಸ್, ್ಯಾಕ್ಸ್ಗಳಲ್ಲಿ ಹಣಕಾಸು ದುರುಪಯೋಗ ಪ್ರಕರಣ ಬೆಳಕಿಗೆ ಬಂದಿವೆ. ಲೆಕ್ಕಪರಿಶೋಧನೆ ಮಾಡುವಾಗ ಸಾಕಷ್ಟು ಬೆಳಕಿಗೆ ಬಂದಿದ್ದು, ಉಪ ನಿಬಂಧಕರು, ಸಹಾಯಕ ನಿಬಂಧಕರು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಹಣ ವಸೂಲಿ ಕೆಲಸ ಮಾಡಬೇಕು. ಬಾಕಿ ಇರುವ ಪ್ರಕರಣಗಳ ತನಿಖೆ ಮಾರ್ಚ್ ಅಂತ್ಯದೊಳಗೆ ಪೂರ್ಣ ಆಗಬೇಕು. ಅಂತೆಯೇ, ಯಾವ ಸಂದ ಲೆಕ್ಕ ಪರಿಶೋಧನೆ ಮಾಡಲ್ಲವೋ, ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ನವೀನ್ ಕುಮಾರ್, ಪ್ರಕರಣ ದಾಖಲಾಗಿದ್ದರೂ ಕೆಲವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.
ಇದಕ್ಕೆ ಗರಂ ಆದ ಸಚಿವ ಕೆ.ಎನ್.ರಾಜಣ್ಣ, 2013ರಲ್ಲಿ ದಾಖಲಾಗಿರುವ ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದುಕೊಂಡಿವೆೆ. ನೀವು ಹೇಳಿದ್ದನ್ನು ಕೇಳಿಸಿಕೊಳ್ಳಲು ಬಂದಿಲ್ಲ, ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳು ಜಾಸ್ತಿ ಇವೆ, ಆಗಬೇಕಾಗಿರುವ ಕೆಲಸದ ಕಡೆ ಗಮನ ಹರಿಸಿ ಎಂದು ತಾಕೀತು ಮಾಡಿದರು.
ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್ಪಿಎಸ್, ಸಹಕಾರ ಇಲಾಖೆಯ ಉಪ ನಿಬಂಧಕ ಕಿಶೋರ್ ಕುಮಾರ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್ಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಹಾಜರಿದ್ದರು.
ಸೊಸೈಟಿಯಿಂದ ಅನ್ಯಾಯ
ಮುಳಬಾಗಿಲು ತಾಲೂಕು ಗೂವುಕುಂಟೆ ಸೊಸೈಟಿ ಕಾರ್ಯದರ್ಶಿ ಹಣ ದುರುಪಯೋಗ ಸಂಬಂಧ ದೂರು ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಮುಂಚೆಯಿಂದಲೂ ಅವ್ಯವಹಾರ ನಡೆದಿದೆ, ಆ ಹಿನ್ನೆಲೆಯಿಂದಲೇ ಬೋರ್ಡ್ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದ ಶಾಸಕ ಕೊತ್ತೂರು ಜಿ.ಮಂಜುನಾಥ್, ಕಾರ್ಯದರ್ಶಿ ಮುಳಬಾಗಿಲು ಬಿಟ್ಟು ಆಂಧ್ರದವರಿಗೆಲ್ಲ ಸಾಲ ನೀಡಿದ್ದಾರೆ ಎಂದು ದೂರಿದರು.
ಹೊಸ ಸಂಗಳ ರಚನೆಗೆ ಒತ್ತು ನೀಡಿ
ಸೆಕ್ಷನ್ 70ರಡಿ ತಾಲೂಕಿನ ನರಸಾಪುರ ಸೊಸೈಟಿ ಸೇರಿ ವಿವಿಧ ಸಂಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಲೋಪಗಳನ್ನು ಪತ್ತೆ ಮಾಡಲು ಸೂಪರ್ವೈಸರ್ ಇದ್ದು, ಹಾಲು ಸಂಘಗಳಿಗೆ ಮತ್ತು ಫ್ಯಾಕ್ಸ್ ಗಳಿಗೆ ಭೇಟಿ ನೀಡಬೇಕು. ಬಾಕಿ ಇರುವ ಎಂಪಿಸಿಎಸ್ಗಳಲ್ಲಿ ಸಾಫ್ಟ್ವೇರ್ ಅಳವಡಿಸಬೇಕು, ಹೊಸ ಸಂಘ ರಚನೆಗೆ ಅವಕಾಶವಿರುವೆಡೆ ಆದ್ಯತೆ ಮೇರೆಗೆ ರಚನೆ ಮಾಡಬೇಕು ಎಂದು ರಾಜಣ್ಣ ತಿಳಿಸಿದರು.
ಅಧಿಕಾರಿಗಳಿಂದ ಅಡ್ಜೆಸ್ಟ್ಮೆಂಟ್
ಮಾಲೂರು ಕ್ಷೇತ್ರದ ವ್ಯಾಪ್ತಿಯಲ್ಲೂ ನವೀಕರಣ ಹಾಗೂ ಸಾಲ ಮರುಪಾವತಿ ಮಾಡದೆ ಇರುವ ಸಂಘಗಳಿಗೂ ಸಾಲ ನೀಡಲಾಗಿದೆ. ಚುನಾಯಿತ ಬೋರ್ಡ್ ಇದ್ದಾಗ ಹೆಚ್ಚು ಕಡಿಮೆ ಆಗುತ್ತದೆ. ಅಧಿಕಾರಿಗಳಿಂದ ಅಡ್ಜೆಸ್ಟ್ಮೆಂಟ್ ಆಗಿರುವುದರಿಂದಲೇ ದುರುಪಯೋಗ ಪ್ರಕರಣಗಳು ಬೆಳಕಿವೆ ಎಂದಿವೆ ಎಂದು ಶಾಸಕ ಕೆ.ವೈ.ನಂಜೇಗೌಡ ದೂರಿದರು. ನನ್ನ ಸ್ವಂತ ಊರಿನ ಸಂಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಲಾಗಿದೆ. ಆದರೆ ಯಾರೊ ಒಬ್ಬರು ದುಡ್ಡು ಎತ್ತಿಕೊಂಡು ಬಿಜಿನೆಸ್ ಹಾಕಿಕೊಂಡರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಈ ಮಧ್ಯೆ ಎಂಎಲ್ಸಿ ಅನಿಲ್ ಕುಮಾರ್ ಧ್ವನಿ ಗೂಡಿಸಿ, ಕೋಲಾರ ಶಾಖೆಯಿಂದ 700 ಸಂಘಗಳಿಗೆ ನೀಡಲಾಗಿದೆ. ಮರುಪಾವತಿ ಆಗದೆ ಇರುವವುಗಳಲ್ಲಿ ಬೋಗಸ್ ಸಂಘಗಳು ಇವೆ ಎಂದು ತಿಳಿಸಿದರು.