ಸಚಿವ ಸುಧಾಕರ್ ವರ್ತನೆ ಸರಿಯೇ?, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪ್ರಶ್ನೆ ಬಡವರಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ

13 Nela Ph 01 DK Shivakumar Food Kit Disterbution
Published on

ನೆಲಮಂಗಲ: ರಾಜ್ಯದೆಲ್ಲೆಡೆ ಸಾರ್ವಜನಿಕ, ಖಾಸಗಿ ಈಜುಕೊಳಗಳನ್ನು ಮುಚ್ಚಿಸಿರುವ ವೈದ್ಯಕೀಯ ಶಿಕ್ಷಣ ಸಚಿವರೇ ಈಜುಕೊಳದಲ್ಲಿ ಈಜಾಡಿರುವುದು ತಲೆ ತಗ್ಗಿಸುವಂಥ ಕೆಲಸವಾಗಿದ್ದು, ನೈತಿಕ ಹೊಣೆ ಹೊರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ತಾಲೂಕಿನ ಅರಿಶಿನಕುಂಟೆ ಮತ್ತು ಜಕ್ಕಸಂದ್ರದಲ್ಲಿ ಸಾವಿರಾರು ಬಡಕುಟುಂಬಗಳಿಗೆ ಸೋಮವಾರ ಆಹಾರ ಸಾಮಗ್ರಿ ಕಿಟ್ ವಿತರಿಸಿ ಮಾತನಾಡಿದರು.

ಜಕ್ಕಸಂದ್ರ ಗ್ರಾಪಂ ಸದಸ್ಯ ಚಿಕ್ಕನಾಗಯ್ಯ ಅವರು, ಸಿದ್ಧಮಾಡಿಕೊಂಡಿದ್ದ 1 ಸಾವಿರ ಆಹಾರ ಕಿಟ್, ಅರಿಶಿನಕುಂಟೆ ಗ್ರಾಪಂ ಸದಸ್ಯ ಚಂದ್ರಕುಮಾರ್ ಅವರು ಸಿದ್ಧಪಡಿಸಿದ್ದ 300 ಕಿಟ್ ವಿತರಣೆ ಮಾಡಿದರು.

ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಭಾನುವಾರ ರಾತ್ರಿಯೇ ಬಡಕುಟುಂಬಗಳಿಗೆ ಟೋಕನ್ ವಿತರಣೆ ಮಾಡಲಾಗಿತ್ತಾದರೂ ವಿತರಣೆ ವೇಳೆ ಕಿಟ್ ಪಡೆಯಲು ಜನ ಮುಗಿಬಿದ್ದರು. ಜನಸಂದಣಿ ನಿಭಾಯಿಸಲು ಪೊಲೀಸರು ಹರಸಹಾಸಪಟ್ಟರು.

ಲಕ್ಷ ರೂ. ಚೆಕ್ ದೇಣಿಗೆ: ತಾಪಂ ಮಾಜಿ ಸದಸ್ಯ ಕೆ.ಎನ್.ಶಿವಣ್ಣ ಮತ್ತು ಗುತ್ತಿಗೆದಾರ ಕೆ.ಎಸ್.ಗಿರೀಶ್‌ಕುಮಾರ್ ಅವರು ಕೆಪಿಸಿಸಿ ಕರೊನಾ ನಿಧಿಗೆ ಒಂದು ಲಕ್ಷ ರೂ. ಚೆಕ್ ಅನ್ನು ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹಸ್ತಾಂತರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ವಸತಿ ಮಾಜಿ ಸಚಿವ ಆಂಜನಮೂರ್ತಿ, ದೊಡ್ಡಬಳ್ಳಾಪುರ ಶಾಸಕ ವೆಂಕಟರಾಮಯ್ಯ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಸ್ವಾಮಯ್ಯ, ಉಪಾಧ್ಯಕ್ಷ ಸಿದ್ದರಾಮು, ಕೆಪಿಸಿಸಿ ಸದಸ್ಯ ಖಲಿಂಉಲ್ಲಾ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ.ರಂಗನಾಥ್, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿ.ಆರ್.ಗೌಡ, ಜಿಪಂ ಮಾಜಿ ಸದಸ್ಯ ಚಲುವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ, ಜಿಲ್ಲಾ ಮಹಿಳಾ ಘಟಕ ಕಾರ್ಯದರ್ಶಿ ರುಕ್ಮಿಣಿ, ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗೋವಧರ್ನ್, ತಾಲೂಕು ಅಧ್ಯಕ್ಷ ಯೋಗೇಶ್, ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯ ಗಂಗಾಧರ್, ಪುರುಷೋತ್ತಮ್ ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net