

ಮೈಸೂರು:ಈ ಹಿಂದೆ ಕರೊನಾ ಸಮಯದಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಸುವ ಮೂಲಕ ಇಡೀ ದೇಶದಲ್ಲಿ ಕೋವಿಡ್ ಹೆಚ್ಚಾಗುವಂತೆ ಮಾಡಲಾಗಿತ್ತು. ಇದೀಗ ಮತ್ತೆ ಎಲ್ಲೆಡೆ ಕರೊನಾ ಕಾಣಿಸಿಕೊಳ್ಳುತ್ತಿದ್ದು, ಈ ಸಮಯದಲ್ಲಿ ರಾಮಮಂದಿರ ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಇದರಿಂದ ಕರೊನಾ ಮತ್ತೆ ಹೆಚ್ಚಾಗುವುದಿಲ್ವಾ ಎಂದು ವಿಶ್ವನಾಥ್ ಪ್ರಶ್ನಿಸಿದರು.
ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಮುರುಳಿ ಮನೋಹರ ಜೋಷಿ ಹಾಗೂ ಎಲ್.ಕೆ.ಅಡ್ವಾಣಿ. ಆದರೆ, ಅವರನ್ನು ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿಲ್ಲ. ಟೀಕೆ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಮುರುಳಿ ಮನೋಹರ ಜೋಷಿ ಹಾಗೂ ಅಡ್ವಾಣಿ ಅವರಿಗೆ ಆಹ್ವಾನ ನೀಡಿಲ್ಲ ಎನ್ನುತ್ತಾರೆ. ಹಾಗಾದರೆ, ಎಚ್.ಡಿ.ದೇವೇಗೌಡರಿಗೆ ವಯಸ್ಸಾಗಿಲ್ವಾ ಎಂದು ಪ್ರಶ್ನಿಸಿದರು.
ಶ್ರೀರಾಮ ಈ ದೇಶದ ಎಲ್ಲರಿಗೂ ದೇವರು. ರಾಮನನ್ನು ಒಂದು ಪಕ್ಷಕ್ಕೆ ಸೀಮಿತ ಮಾಡಬಾರದು ಎಂದ ಅವರು, ಕರೊನಾ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ರಾಮಂದಿರ ಉದ್ಘಾಟನೆಯಿಂದ ಎಷ್ಟು ಜನರನ್ನು ಬಲಿ ಪಡೆಯಲು ಹೊರಟಿದ್ದಾರೆ? ದೇಶದ ಜನ ಬುದ್ಧಿವಂತರು, ಸಾಕ್ಷರರು. ಈ ಬಗ್ಗೆ ಎಲ್ಲವನ್ನೂ ಯೋಚಿಸುತ್ತಾರೆ ಎಂದರು.