

ಹುಬ್ಬಳ್ಳಿ: ಕರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವುದನ್ನು ಯಾವ ಕಾರಣಕ್ಕೂ ಒಪ್ಪಲೂ ಸಾಧ್ಯವಿಲ್ಲ. ಥಿಯೇಟರ್, ಜಿಮ್ಲ್ಲಿ ಮಾತ್ರ ಕರೊನಾ ಇದೆಯಾ ಎಂದು ನಟ ದುನಿಯಾ ವಿಜಯ ಪ್ರಶ್ನಿಸಿದ್ದಾರೆ.
ಸಲಗ ಚಿತ್ರದ ಪ್ರಚಾರಕ್ಕೆ ಭಾನುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ಹೇರಿದ್ದ ನಿರ್ಬಂಧಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಮೇಲೆ ಏ. 6ರವರೆಗೆ ಕೈ ಬಿಡಲಾಗಿದೆ. ನಂತರವೂ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸಲಗ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ನನ್ನ ಪ್ರಕಾರ ಜಿಮ್ ಮತ್ತು ಥಿಯೇಟರ್ಗೆ ಹೋಗುವವರಿಂದ ಮಾತ್ರ ಕರೊನಾ ಬರುತ್ತೆ ಅಂಥಾ ಕಾಣುತ್ತೆ. ಒಂದು ಜಿಮ್ಲ್ಲಿ ಮೊದಲು 25-30 ಜನ ಸೇರುತ್ತಿದ್ದರು. ಈಗ ಆ ಸಂಖ್ಯೆ 15ಕ್ಕೆ ಇಳಿದಿದೆ. ಪಾಪ ಅವರು ತುಂಬಾ ಕಷ್ಟದಲ್ಲಿದ್ದಾರೆ. ಸಿನಿಮಾ ವೀಕ್ಷಿಸಲು 500-600 ಜನ ಬರಬಹುದು. ಅದು ಸಹ ಈಗ ಕಡಿಮೆಯಾಗಿದೆ. ಸಾವಿರಾರು ಜನ ಸೇರುವ ರಾಜಕೀಯ ಸಭೆ, ಸಮಾರಂಭ, ಮೆರವಣಿಗೆ ನಡೆಯಬಹುದು. ಚಿತ್ರರಂಗಕ್ಕೆ ಮಾತ್ರ ನಿರ್ಬಂಧ ಯಾಕೆ ಎಂದು ನಾವು ಪ್ರಶ್ನಿಸುತ್ತಿದ್ದೇವೆ ಎಂದರು.
ನಿರ್ವಪಕ ಕೆ.ಪಿ. ಶ್ರೀಕಾಂತ ಮಾತನಾಡಿ, ವರ್ಷದ ಹಿಂದೆಯೇ ಸಲಗ ಚಿತ್ರ ರೆಡಿ ಇದೆ. ಕರೊನಾ ಹಿನ್ನೆಲೆಯಲ್ಲಿ 3 ವಾರಕ್ಕೊಮ್ಮೆ ಒಂದೊಂದೇ ಕನ್ನಡ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಯುವರತ್ನ ಬಳಿಕ ಕೋಟಿಗೊಬ್ಬ-3 ಚಿತ್ರದ ಸರದಿ. ಬಳಿಕ ಸಲಗ ಬಿಡುಗಡೆಯಾಗಬೇಕಿದೆ. ಶೇ. 50ರಷ್ಟು ಆಸನ ಭರ್ತಿಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದರು.
ನಮ್ಮ ಹಿಂದಿನ ಚಿತ್ರ ಟಗರು ಸಾಕಷ್ಟು ಹಿಟ್ ಆಗಿತ್ತು. ದುನಿಯಾ ವಿಜಯ ಅವರು ಕಥೆ ಹೇಳಿದ್ದಾಗಲೇ ಸಲಗ ಚಿತ್ರ, ಟಗರು ಚಿತ್ರವನ್ನು ಮೀರಿಸುವ ಹಾಗೇ ಇರುತ್ತೆ ಎಂದು ಗ್ಯಾರಂಟಿ ಆಗಿದೆ. ಸರ್ಕಾರದ ನಿರ್ಬಂಧವನ್ನು ನೋಡಿಕೊಂಡು ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸುತ್ತೇವೆ. ಏ. 6ರಂದು ಚಿತ್ರದ ಹಾಡೊಂದನ್ನು ಯೂಟ್ಯೂಬ್ ಮ್ಯೂಸಿಕ್ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ಕೋಟಿಗೊಬ್ಬ ಚಿತ್ರದ ನಿರ್ವಪಕ ಸೂರಪ್ಪ ಬಾಬು, ನಟ ಡಾಲಿ ಧನಂಜಯ, ಶ್ರೀ ದುರ್ಗಾ ಡವಲಪರ್ಸ್ ಆಂಡ್ ಪ್ರಮೋಟರ್ಸ್ನ ಎಂಡಿ ವಿರೇಶ ಉಂಡಿ, ವಿತರಕ ಕುಮಾರ ಶೆಟ್ಟರ್, ಶಿವಾನಂದ ಮುತ್ತಣ್ಣವರ, ರಜತ ಉಳ್ಳಾಗಡ್ಡಿಮಠ ಇದ್ದರು.
ಅಭಿಮಾನಿಗಳು ಸೆಲ್ಪಿ ತೆಗೆದುಕೊಳ್ಳಲು ಮುಂದೆ ಬರಬೇಡಿ. ನಮ್ಮಿಂದ ದೂರ ಇರಿ. ಸಿನಿಮಾ ಮಂದಿಯಿಂದ ಕರೊನಾ ಬರುತ್ತದೆ ಎಂದು ಸರ್ಕಾರ ಹೇಳುತ್ತಿದೆ. ದುನಿಯಾ ವಿಜಯ, ನಟ