ಕೊಲೆ ಮಾಡುವ ಸಂಸ್ಕೃತಿ ಪ್ರೀತಿನಾ? : ಎಂ.ಬಿ.ಭಾನುಪ್ರಕಾಶ್

ex mlc m.b.bhanuprakash speak in sinappa shetty circle
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್ ಮಾತನಾಡಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಟಿ.ಡಿ.ಮೇಘರಾಜ್, ಗಿರೀಶ್ ಪಟೇಲ್ ಇದ್ದರು.
Published on

ಶಿವಮೊಗ್ಗ: ಮನೆ ಮನೆಗೆ ಹೋಗಿ ಮತಯಾಚನೆ ಮಾಡುವ ಸಂದರ್ಭ ಇದಾಗಿದೆ. ಆದರೆ ನೇಹಾ ಹತ್ಯೆ ಎಲ್ಲರಲ್ಲಿಯೂ ದುಗುಡವನ್ನುಂಟು ಮಾಡಿದೆ. ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ನೇಹಾ ಕುಟುಂಬಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹೇಳಿದರು.

ನಗರದ ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಇದು ಲವ್ ಜಿಹಾದ್ ಎಂದು ನಾವು ಹೇಳಿದರೆ, ವೈಯಕ್ತಿಕ ಪ್ರೇಮ ಪ್ರಕರಣವೆಂದು ಗೃಹ ಸಚಿವರು ಹೇಳುತ್ತಿದ್ದಾರೆ. ಎರಡೂ ಕಡೆಯಿಂದ ಆದಾಗ ಅದು ಪ್ರೀತಿ. ಆದರೆ ಕೊಲೆ ಮಾಡುವ ಸಂಸ್ಕೃತಿ ಪ್ರೀತಿನಾ? ಇದು ಜಿಹಾದಿ ಮನಸ್ಥಿತಿ ಕೃತ್ಯವೇ ಹೊರತು ಬೇರೆ ಏನೂ ಅಲ್ಲವೆಂದು ಕಿಡಿಕಾರಿದರು.
ಕೆಲ ಮುಸಲ್ಮಾನರು ತಮ್ಮ ಮಾನಸಿಕತೆಯನ್ನು ಬದಲಾವಣೆ ಮಾಡಿಕೊಳ್ಳದೆ ಇರುವುದೇ ಇದಕ್ಕೆ ಕಾರಣವಾಗಿದೆ. ಮುಸಲ್ಮಾನ್ ಸಮಾಜದ ಇಂತಹವರು ಬದಲಾಗದಿದ್ದರೆ ಸಹಿಸಲು ಸಾಧ್ಯವಿಲ್ಲ. ಔರಂಗಜೇಬನಿಂದ ಹಿಡಿದು ಅನೇಕರ ಸ್ಥಿತಿ ಇತಿಹಾಸದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಹಿಂದುಗಳ ವಿರೋಧಿಯಾಗಿ ನಡೆದುಕೊಳ್ಳುತ್ತದೆ. ಇಡೀ ವಿಶ್ವದಲ್ಲಿ ಮುಸಲ್ಮಾನ್ ಸಮಾಜ ಬದಲಾಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಬದಲಾಗುತ್ತಿಲ್ಲ. ಹಿಂದು ಸಮಾಜದೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರ ದೇಶದ ಅಭಿವೃದ್ಧಿ, ಐಕ್ಯತೆ ಸಾಧ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net