ನೀರಾವರಿ ಕಾಮಗಾರಿಗೆ ಶೀಘ್ರ ಚಾಲನೆ

Gurugunta Mla
ಗುರುಗುಂಟಾ ಸಮೀಪದ ಗೋಲಪಲ್ಲಿಯಲ್ಲಿ ಭಾನುವಾರ ಶಾಸಕ ಮಾನಪ್ಪ ವಜ್ಜಲ್ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಗುಂತಗೋಳ ಸಂಸ್ಥಾನಿಕ ರಾಜಾ ಶ್ರೀನಿವಾಸನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಪ್ರಮುಖರಾದ ಗಜೇಂದ್ರನಾಯಕ, ನಂದೀಶ ನಾಯಕ ಇದ್ದರು.
Published on

ಗುರುಗುಂಟಾ: ಗುರುಗುಂಟಾ ಜಿಪಂ ವ್ಯಾಪ್ತಿಯ ಗ್ರಾಮ, ದೊಡ್ಡಿಗಳಲ್ಲಿ ಅನೇಕ ಸಮಸ್ಯೆಗಳಿದ್ದು, ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಗದ್ಗಿತಾಂಡಾ ಗ್ರಾಮದ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಕೊಠಡಿಗಳು, ಪೈದೊಡ್ಡಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭಾನುವಾರ ಚಾಲನೆ ಮಾತನಾಡಿದರು. ಈ ಭಾಗದಲ್ಲಿ ಪ್ರಮುಖವಾಗಿ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಆದಷ್ಟು ಬೇಗ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಇದರಿಂದ ಕಾರ್ಮಿಕರು ಗುಳೆ ಹೋಗುವುದು ತಪ್ಪಲಿದೆ. ದೊಡ್ಡಿ, ತಾಂಡಾಗಳಲ್ಲಿ ಶಾಲಾ ಕೊಠಡಿ, ವಿದ್ಯುತ್ ಸೌಕರ್ಯ, ಶಿಕ್ಷಕರ ಕೊರತೆ ನೀಗಿಸುವುದು, ಕುಡಿವ ನೀರು, ರಸ್ತೆ ಸೌಲಭ್ಯಗಳನ್ನು ಒದಗಿಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಮುಖಂಡರಾದ ನಾಗಭೂಷಣ, ಗಜೇಂದ್ರ ನಾಯಕ, ಎನ್.ಸ್ವಾಮಿ ನಾಯಿಕೊಡಿ, ಪರಮೇಶ ಯಾದವ್, ನಂದೇಶ ನಾಯಕ, ರಮೇಶ ಉಳಿಮೇಶ್ವರ, ವೆಂಕೋಬ್ ಪವಾಡೆ, ಶಿವಪ್ಪ ಗೊಲಪಲ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net