ನೀರಾವರಿ, ಜಲ ಸಂರಕ್ಷಣೆ ಮಾಹಿತಿ

VILLAIN
VILLAIN
Published on

ಹುಬ್ಬಳ್ಳಿ: ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನ ನಿಮಿತ್ತ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ (ಇಂಡಿಯಾ) ಹುಬ್ಬಳ್ಳಿ ಸೆಂಟರ್ ವತಿಯಿಂದ ನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಇಂಜಿನಿಯರ್ ದಿನವನ್ನು ಸೋಮವಾರ ಆಚರಿಸಲಾಯಿತು.

ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಉದ್ಘಾಟಿಸಿ ಮಾತನಾಡಿ, ನೀರಾವರಿ ಮತ್ತು ಜಲ ಸಂರಕ್ಷಣೆ ಕುರಿತು ವಿವರಿಸಿದರು.

ಇಂಜಿನಿಯರ್ ವಸಂತ ಪಾಲ್ನಕರ ಪ್ರಸ್ತಾವಿಕವಾಗಿ ಮಾತನಾಡಿದರು. ಕೆಶಿಪ್ ಮುಖ್ಯ ಯೋಜನಾಧಿಕಾರಿ, ಐಆರ್‌ಸಿ ನ್ಯೂ ಡೆಲ್ಲಿ ಉಪಾಧ್ಯಕ್ಷ ಶಂಕರಗೌಡ ಎಫ್. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು.

ಇಂಜಿನಿಯರ್‌ಗಳಾದ ಉಳುವಪ್ಪ ಸುಣಗಾರ, ಸುರೇಶ ಕಿರೇಸೂರ, ಸಂಗಮೇಶ ಹೊರಗಿನಮಠ, ವಿಜಯ ಯರಜರ್ವಿ, ಮಡಿವಾಳಪ್ಪ ಜುಂಜನವರ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಶರತ್‌ಕುಮಾರ ಎಚ್.ಆರ್., ವಿವೇಕಾನಂದ ಚುಟಕೆ, ಪ್ರೊ. ಗುರುನಾಥ ಕಂಪ್ಲಿ ಇತರರು ಇದ್ದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಪಾಟೀಲ ಸ್ವಾಗತಿಸಿದರು. ಇಂಜಿನಿಯರ್ ಶ್ರೀಕಾಂತ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net