

ಸಂಬರಗಿ: ಗಡಿಭಾಗದ ಖಿಳೇಗಾಂವ ಬಸವೇಶ್ವರ ಏತ ನೀರಾವರಿಯ 2ನೇ ಹಂತದ ಯೋಜನೆ ಹಾಗೂ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಕೊಟ್ಟಲಗಿ&ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಬರಪೀಡಿತ ಗ್ರಾಮಗಳಲ್ಲಿ ಹಸಿರು ಕ್ರಾಂತಿ ಮಾಡಿಯೇ ತೀರುತ್ತೇವೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ಸಮೀಪದ ಗುಂಡೇವಾಡಿ ಗ್ರಾಮದಲ್ಲಿ ಕಷ್ಣಾ ನದಿಯಿಂದ 138.81 ಕೋಟಿ ರೂ. ವೆಚ್ಚದಲ್ಲಿ ಗಡಿಭಾಗದ 11 ಕೆರೆ ತುಂಬುವ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದರು. ಚುನಾವಣೆಯಲ್ಲಿ ನೀಡಿದ ನೀರಾವರಿ ಯೋಜನೆಗಳನ್ನು ಹಂತ&ಹಂತವಾಗಿ ಪೂರ್ಣಗೊಳಿಸುತ್ತಿದ್ದೇವೆ. ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದರು.
ಯೋಜನೆ ಮೂಲಕ ಪಾರ್ಥನಳ್ಳಿ, ಗುಂಡೇವಾಡಿ ಹಾಗೂ ಅನಂತಪುರ ಗ್ರಾಮದ ತಲಾ ಎರಡು ಕೆರೆ ಹಾಗೂ ಬೇಡರಹಟ್ಟಿ, ಚಮಕೇರಿ, ಬೆವನೂರ, ಬಳ್ಳಿಗೇರಿ, ಮಲಾಬಾದ ಗ್ರಾಮದ 1 ಕೆರೆಗೆ ಕಷ್ಣಾ ನದಿಯಿಂದ ಪೈಪ್ಲೆನ್ ಮೂಲಕ ನೀರು ತುಂಬಿಸಲಾಗುವುದು ಎಂದರು.
ಶಾಸಕ ರಾಜು ಕಾಗೆ ಮಾತನಾಡಿದರು. ಕೃಷ್ಣಾ ಸಹಕಾರಿ ಸಂದ ಅಧ್ಯ ಪರಪ್ಪ ಸವದಿ, ಶಂಕರ ವಾಮೋಡೆ, ನಿಜಗುಣಿ ಮಗದುಮ್ಮ, ಸಿದರಾಯ ತೇಲಿ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಮಹಾದೇವ ಗುಂಜಿಗಾವಿ, ಗೂಳಪ್ಪ ಜತ್ತಿ, ಜಯಶ್ರೀ ಯಳ್ಳೂರ, ಶಿವಾನಂದ ಗೊಲಬಾವಿ, ಬಸವರಾಜ ಅಂಗಡಿ, ಚೂನಪ್ಪ ಪೂಜಾರಿ, ಚಂದ್ರಕಾಂತ ಇಮ್ಮಡಿ, ಕೆ.ಆರ್. ಪಾಟೀಲ, ಡಾ. ಚನ್ನಪ್ಪ ಸಂಕ್ರಟ್ಟಿ, ಪುಂಡಲೀಕ ಜಾಧವ, ಕಾಗವಾಡ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯೆ ರೇಖಾ ಪುಂಜಪ್ಪಗೋಳ, ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯ ಓಂಪ್ರಕಾಶ ಪಾಟೀಲ, ಶಿವಾನಂದ ಗುಡ್ಡಾಪುರ, ಪ್ರವಿಣ ಹುಣಶೀಕಟ್ಟಿ, ಗುತ್ತಿಗೆದಾರರಾದ ಜೆ.ಎನ್. ಶೆಟ್ಟಿ, ಹಾಗೂ ಅಶೋಕ ಕಪ್ಪಲಗುದ್ದಿ ಇತರರಿದ್ದರು.