ನೀರಾವರಿ ಸೌಕರ್ಯಕ್ಕೆ ಆದ್ಯತೆ

web5
ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಲಕ್ಷ್ಮಣರಾವ ಜಿಂಗಳೆ, ಎಸ್.ಬಿ.ಘಾಟಗೆ, ರಾಹುಲ ಜಾರಕಿಹೊಳಿ, ಸಿದ್ದು ಬಂಡಗರವ, ಸಂಜಿವಕುಮಾರ ಬಾನೆಸರಕಾರ, ಸದಾಶಿವ ದೇಶಿಂಗೆ, .ಎನ್.ಎ.ಮಗದುಮ್ಮ ಇತರರಿದ್ದರು.
Published on

ರಾಯಬಾಗ: ತಾಲೂಕಿಗೆ ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಕಲ್ಪಿಸಲು ರೂಪುರೇಷೆ ತಯಾರಿಸುತ್ತಿದ್ದು, ಶೀಘ್ರದಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಮಾತನಾಡಿದ ಅವರು, ತಾಲೂಕಿನಲ್ಲಿ ಬರ ಎದುರಿಸುತ್ತಿರುವ ಪ್ರದೇಶಗಳ ಅಧ್ಯಯನ ಮಾಡಿ, ನೀರಾವರಿ ಯೋಜನೆಗಳ ಜಾರಿಗೊಳಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕೃಷ್ಣಾ ನದಿಯಿಂದ ಹಾಗೂ ಹಿಡಕಲ್ ಜಲಾಶಯದಿಂದ ನೀರು ಬಳಕೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಗೃಹಲಕ್ಷ್ಮೀ ಯೋಜನೆ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮೆ ಆಗಲಿದೆ. ಯಾರೂ ಊಹಾಪೋಹಗಳಿಗೆ ಕಿವಿಗೊಡಬಾರದು. ರಾಯಬಾಗ ಮತ್ತು ಕುಡಚಿ ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಬೆಳಗಾವಿ ಜಿಲ್ಲಾ ಕೆಎಂಎಫ್ ನಿರ್ದೇಶಕರಾಗಿ ಸರ್ಕಾರದಿಂದ ನಾಮನಿರ್ದೇಶಿತರಾದ ಸದಾಶಿವ ದೇಶಿಂಗೆ ಅವರನ್ನು ಸತ್ಕರಿಸಲಾಯಿತು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಜಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಮಾಜಿ ಶಾಸಕ ಎಸ್.ಬಿ. ಘಾಟಗೆ, ಯುವ ಧುರೀಣ ರಾಹುಲ ಜಾರಕಿಹೊಳಿ, ಕೆಪಿಸಿಸಿ ಸದಸ್ಯ ಅರ್ಜುನ ನಾಯಿಕವಾಡಿ, ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಬಂಡಗರ, ಸಂಜಿವಕುಮಾರ ಬಾನೆಸರಕಾರ, ಸದಾಶಿವ ದೇಶಿಂಗೆ, ಡಾ.ಎನ್.ಎ. ಮಗದುಮ್ಮ, ಅಪ್ಪಾಸಾಬ ಕುಲಗುಡೆ, ಹಾಜಿ ಮುಲ್ಲಾ, ಅಬ್ದುಲ್‌ಸತ್ತಾರ ಮುಲ್ಲಾ, ದಿಲೀಪ ಜಮಾದಾರ, ನಾಮದೇವ ಕಾಂಬಳೆ, ಕಿರಣ ಕಾಂಬಳೆ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net