ನೀರಾವರಿ ಕ್ಷೇತ್ರವಾಗಿಸಲು ಬದ್ಧ

oplus_140509184
oplus_140509184
Published on

ತೆಲಸಂಗ: ಅಥಣಿ ಕ್ಷೇತ್ರದ ಎಲ್ಲ ಜಮೀನುಗಳಿಗೆ ನೀರು ಕೊಡಬೇಕು ಎನ್ನುವ ಕನಸು ಕೆಲವೇ ತಿಂಗಳಲ್ಲಿ ನನಸಾಗಲಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಗ್ರಾಮದ ಹಳ್ಳಗಳಿಗೆ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 2 ಚೆಕ್ ಡ್ಯಾಂಗಳಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತೆಲಸಂಗ ಸೇರಿ 9 ಕೆರೆಗಳು ಇದರಿಂದ ತುಂಬಲಿವೆ. ಅಮ್ಮಾಜೇಶ್ವರಿ ಏತ ನೀರಾವರಿ ಪೂರ್ಣಗೊಳ್ಳುವುದರೊಂದಿಗೆ ಕೊಟ್ಟ

ಮಾತು ಉಳಿಸಿಕೊಂಡಿದ್ದೇನೆ. ರೈತರು ಸ್ವಾಭಿಮಾನದಿಂದ ಜೀವನ ನಡೆಸಿದರೆ ನನ್ನ ರಾಜಕಿಯ ಜೀವನ ಸಾರ್ಥಕವಾಗುತ್ತದೆ ಎಂದರು.

ಈ ಭಾಗದಲ್ಲಿ ಬಾಂದಾರ ಹಾಗೂ ಕೆರೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇನೆ. ವರ್ಷವಿಡಿ ಕೃಷಿಗೆ ನೀರು ಸಿಗಲಿ ಎಂಬ ಉದ್ದೇಶದಿಂದ ಕೃಷಿ ಇಲಾಖೆಯಿಂದ 8.5 ಕೋಟಿ ರೂ. ವೆಚ್ಚದಲ್ಲಿ ಬಾಂದಾರ ನಿರ್ಮಿಸುವ ಕೆಲಸ ಈಗಾಗಲೇ ನಡೆದಿದೆ. ಹರಿದು ಹೋಗುವ ನದಿ ನೀರನ್ನು ಭೂಮಿಯಲ್ಲಿ ಇಂಗಿಸಲು ಬೋರ್ ಕೊರೆದು ರೀಚಾರ್ಜ್ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಿ ನೀರು ಬಳಸಿಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಈಗಾಗಲೇ ಆರೇಳು ಕಡೆ ಪ್ರಯೋಗ ಮಾಡಿ ಯಶಸ್ವಿ ಆಗಿದ್ದೇವೆ.

ಇದರಿಂದ ರೈತರಿಗೆ ವರ್ಷಪೂರ್ತಿ ಬೆಳೆ ಬೆಳೆಯಲು ಅನುಕೂಲ ಆಗಲಿದೆ. ಹಾಗಾಗಿ ನಾಬಾರ್ಡ್ ಜತೆ ಮಾತನಾಡಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಒಂದು ಸಾವಿರ ಘಟಕಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರ ಮೊಗದಲ್ಲಿ ನಗೆ ಮೂಡುವಂತೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಕ್ ಕಾಂಗ್ರೆಸ್ ಅಧ್ಯಕ್ಷ ಅಮಗೊಂಡ ಖೊಬ್ರಿ, ಮುಖಂಡರಾದ ರಾವಸಾಹೇಬ ದೇವನೂರ, ಸುಭಾಷ ಸೋನಕರ, ಮಲ್ಲು ಡಂಗಿ, ಕಾಶೀನಾಥ ಕುಂಬಾರ, ಅಶೋಕ ಉಂಡೋಡಿ, ರಘು ದೊಡ್ಡನಿಂಗಪ್ಪಗೋಳ, ಯಂಕಣ್ಣ ಅಸ್ಕಿ, ಡಾ.ರಾಜಶೇಖರ ಪೂಜಾರಿ, ಶ್ರೀಶೈಲ ಶೆಲ್ಲೆಪ್ಪಗೋಳ, ಶೇಖರ ವಳಸಂಗ, ದರೆಪ್ಪ ಮಾಳಿ, ಸಣ್ಣ ನೀರಾವರಿ ಇಲಾಖೆ ಎಇ ಪ್ರವೀಣ ಪಾಟೀಲ, ಎಇ ಸಿದ್ದು ಲಾಂಡಗೆ, ಸದಾಶಿವ ಸವದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net