ಅರಣ್ಯ ಅತಿಕ್ರಮಣದಾರರ ವಿಚಾರದಲ್ಲಿ ಬೇಜವಾಬ್ದಾರಿ

vishweshwar Hegde Kageri
Published on

ಶಿರಸಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅರಣ್ಯ ಅತಿಕ್ರಮಣದಾರರ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿ ಆಯೊಜಿಸಿ ಮಾತನಾಡಿದ ಅವರು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೆ. 22ರಂದು ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯಲ್ಲಿನ ಒತ್ತುವರಿ ಪ್ರಕರಣಗಳನ್ನು ತೆರುವುಗೊಳಿಸಲು ಸಂಬಂಧಿಸಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಟಿಪ್ಪಣಿಯು ಅರಣ್ಯ ಅತಿಕ್ರಮಣದಾರರ ಜೀವನದ ಭದ್ರತೆಯನ್ನು ಪ್ರಶ್ನಿಸುವ ಪತ್ರವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಅರಣ್ಯ ಅತಿಕ್ರಮಣದಾರರ ವಿರುದ್ಧ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಅತಿಕ್ರಮಣದಾರರನ್ನು ಹೀನಾಯವಾಗಿ ನೋಡಬಾರದು. ಹಗಲು ವೇಷದ ಹೋರಾಟದಿಂದ ನ್ಯಾಯ ಸಿಗುವುದಿಲ್ಲ. ರಾಜಕಾರಣ ಮಾಡದೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲೆಯ ಕಾಂಗ್ರೆಸ್ ನಾಯಕರು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಅರಣ್ಯ ಅತಿಕ್ರಮಣ ದಾರರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ. ಅವರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.

ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ್, ನಾಗರಾಜ ಶೆಟ್ಟಿ, ರಾಜೇಶ್ ಶೆಟ್ಟಿ,ಉಷಾ ಹೆಗಡೆ, ಸದಾನಂದ ಭಟ್ ಇದ್ದರು.

ಲೋಕಸಭಾ ಚುನಾವಣೆಗೆ ನಾವು ವ್ಯವಸ್ಥಿತವಾಗಿ ಸಿದ್ಧತೆಯನ್ನು ಮಾಡುತ್ತಿದ್ದೇವೆ. ಪಕ್ಷದ ವರಿಷ್ಠರು ಯಾರನ್ನು ಸೂಚಿಸುತ್ತಾರೋ ಅವರ ಗೆಲುವಿಗೆ ನಾವು ಶ್ರಮಿಸುತ್ತೇವೆ. | ವಿಶ್ವೇಶ್ವರ ಹೆಗಡೆ ಕಾಗೇರಿ.ಮಾಜಿ ಸ್ಪೀಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net