ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಕ್ರಮ: ತನಿಖೆಗೆ ಡಾ.ಕೆ. ಮಹದೇವ್ ಆಗ್ರಹ

mysore university
Published on


ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ನೀಡಿದ ಗುತ್ತಿಗೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯಪಾಲರು ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಕೆ. ಮಹದೇವ್ ಹೇಳಿದರು.
ವಿಶ್ವ ವಿದ್ಯಾಲಯದಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದು, ತಲಾ ಒಬ್ಬ ವಿದ್ಯಾರ್ಥಿಯ ಪರೀಕ್ಷಾ ನಿರ್ವಹಣಾ ವೆಚ್ಚಕ್ಕೆ ಲರ್ನಿಂಗ್ ಸ್ಪೈರಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 64 ರೂ.ಗಳಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಈ ಮೊತ್ತದಲ್ಲಿ ಪರೀಕ್ಷಾ ನಿರ್ವಹಣೆ ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಈ ಮೊತ್ತವನ್ನು 18 ರೂ. ಹೆಚ್ಚಿಸುವಂತೆ ಸಂಸ್ಥೆ ಕೋರಿಕೊಂಡಿತ್ತು. ಆದರೆ ಈ ಕುರಿತು ಕ್ರಮ ವಹಿಸದ ವಿಶ್ವವಿದ್ಯಾ ಲಯ ಈ ಸಂಸ್ಥೆಯ ಟೆಂಡರ್ ಅವಧಿ ಬಾಕಿ ಇರುವಾಗಲೇ ಹೊಸ ಟೆಂಡರ್ ಕರೆದು ಮೆಟಾ ಐ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ 360 ರೂ.ಗೆ ಟೆಂಡರ್ ನೀಡಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಟೆಂಡರ್‌ನಲ್ಲಿ ಭಾಗವಹಿಸಿದ ಆಟ್ರಿಸ್ ಪ್ರೈವೇಟ್ ಲಿಮಿಟೆಡ್ ಕಡಿಮೆ ದರ ನಮೂದಿಸಿತ್ತು. ಆದರೆ ಹೆಚ್ಚು ದರ ನಮೂದಿಸಿದ ಮೆಟಾ ಸಂಸ್ಥೆಗೆ ವಿಶ್ವವಿದ್ಯಾಲಯ ಯಾವ ಮಾನದಂಡದಲ್ಲಿ ಟೆಂಡರ್ ನೀಡಿತು? ಇದು ಪಾರದರ್ಶಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಲರ್ನಿಂಗ್ ಸ್ಪೈರಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಟೆಂಡರ್ ಅವಧಿ 2017 ನವೆಂಬರ್‌ನಿಂದ 2020 ಮೇ ವರೆಗೆ (ಒಟ್ಟು  ಆರ್ ಸೆಮಿಸ್ಟರ್) ಇತ್ತು. ಆದರೆ, ಎರಡು ಸೆಮಿಸ್ಟರ್ ಬಾಕಿ ಇರುವಾಗಲೇ ತರಾತುರಿಯಲ್ಲಿ ಹೊಸ ಟೆಂಡರ್ ಕರೆಯುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net