ಆರೋಗ್ಯ ಇಲಾಖೆ ನೇಮಕಾತಿಯಲ್ಲಿ ಅಕ್ರಮ

6 ckm 5 kelaguru ramesh
ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಮಾತನಾಡಿದರು.
Published on

ಚಿಕ್ಕಮಗಳೂರು: ಆರೋಗ್ಯ ಇಲಾಖೆಯಲ್ಲಿ ೬೧ ವೈದ್ಯರು ಮತ್ತು ನರ್ಸ್ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕೆಳಗೂರು ರಮೇಶ್ ಆರೋಪಿಸಿದರು

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬೧ ಹುದ್ದೆಗೆ ೯೪೩ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅನುಸರಿಸಿರುವ ಮಾನದಂಡದ ಬಗ್ಗೆ ಯಾವುದೇ ಮಾಹಿತಿ ನೀಡದೆ ಅಕ್ರಮ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ದೂರಿದರು.
ರಾಷ್ಟಿçÃಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಯ್ಕೆ ಸಂದರ್ಭದಲ್ಲಿ ಅಕ್ರಮ ನಡೆಸಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವೆಸಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಈ ಅಕ್ರಮದ ಬಗ್ಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಹಣಕೊಟ್ಟವರು ಉದ್ಯೋಗ ಪಡೆದುಕೊಂಡಿರುವ ಶಂಕೆ ಇದೆ. ಅರ್ಹತೆ ಇದ್ದೂ ಹಣನೀಡದವರನ್ನು ಆಯ್ಕೆಪಟ್ಟಿಯಲ್ಲಿ ಕಡೆಗಣಿಸಲಾಗಿದೆ. ಈ ಕುರಿತು ಮಾಹಿತಿಹಕ್ಕು ಅಧಿನಿಯಮ ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಹಸ್ತಾಂತರಮಾಡಿದ್ದಾರೆ. ಸಾರ್ವಜನಿಕ ಮಾಹಿತಿ ಅಧಿಕಾರಿ ೧೨,೦೮೪ ಪುಟಗಳು ಇರುವುದರಿಂದ ಪ್ರತಿ ಪುಟಕ್ಕೆ ೨ ರೂಪಾಯಿಗಳಂತೆ ನಮ್ಮಿಂದ ೨೪ಸಾವಿರ ರೂ. ಕಟ್ಟಿಸಿಕೊಂಡಿದ್ದಾರೆ ಎಂದರು.
ಆಯ್ಕೆಯ ಮಾನದಂಡದಲ್ಲಿ ನಡೆದಿರುವ ಅಕ್ರಮ ಮುಚ್ಚಿಹಾಕುವ ಉz್ದೆÃಶದಿಂದ ನನಗೆ ನೋಟಿಸ್ ಕೊಡುತ್ತಾರೆ. ಆ ನೋಟಿಸ್‌ಗೆ ೫ ಹಿಂಬರಹಕೊಟ್ಟು ನನಗೆ ಬೇಕಾಗಿರುವ ಮಾಹಿತಿನೀಡುವಂತೆ ಕೋರಲಾಗಿದೆ. ಅಗತ್ಯವಿರುವ ಪುಟಗಳು ಎಂದು ಅನಗತ್ಯ ೧೨೦೮೪ ಪುಟಗಳ ಮಾಹಿತಿ ನೀಡಿ ವಂಚಿಸಿದ್ದಾರೆ ಎಂದು ದೂರಿದರು.
ಸರಿಯಾದ ಮಾಹಿತಿ ನೀಡದೆ ವಂಚಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೇಲೆ ಮಾಹಿತಿ ಆಯೋಗ ಕೋರ್ಟ್ನಲ್ಲಿ ದೂರುದಾಖಲಿಸಿz್ದÉÃವೆ ಮತ್ತು ಸರ್ಕಾದ ತನಿಖಾ ಸಂಸ್ಥೆಗಳಿಗೂ ಅಹವಾಲು ಸಲ್ಲಿಸಲಿz್ದÉÃವೆ.ಈ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರಿಗೂ ದೂರು ಸಲ್ಲಿಸಿz್ದÉÃವೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಹೊನ್ನೇಶ್, ಸುಜಯ್, ಜಗದೀಶ್ ಚಕ್ರವರ್ತಿ, ಚೇತನ್‌ಜೇನುಬೈಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net