ಕರೊನಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ: ನ್ಯಾಯಾಂಗ ತನಿಖೆಗೆ ಕೈ ಪಟ್ಟು

web2
Published on

ತುಮಕೂರು: ಕರೊನಾ ಸಲಕರಣೆಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆಸಿದ್ದು, ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸುವ ಜತೆಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಒತ್ತಾಯಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಪಿಎಂ ಕೇರ್ ಯೋಜನೆಯಲ್ಲಿ 4 ಲಕ್ಷ ರೂ. ನೀಡಿ 50 ಸಾವಿರ ವೆಂಟಿಲೇಟರ್ ಖರೀದಿಸಿದೆ, ರಾಜ್ಯ ಸರ್ಕಾರ ಪ್ರತಿ ವೆಂಟಿಲೇಟರ್‌ಗೆ 5.60 ಲಕ್ಷ ರೂ.ಗಳಿಂದ 18.20 ಲಕ್ಷ ರೂ.ಗೆ ಖರೀದಿ ವಾಡಿದೆ. 9.65 ಲಕ್ಷ ಪಿಪಿಇ ಕಿಟ್‌ಗಳಿಗೆ ಮಾರುಕಟ್ಟೆ ಬೆಲೆಗಿಂತ ಆರು ಪಟ್ಟು ಜಾಸ್ತಿ ಹಣ ನೀಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದರು.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಬೇರೆ ರಾಜ್ಯಗಳಿಗಿಂತ ಕರ್ನಾಟಕ 2 ರಿಂದ 3 ಪಟ್ಟು ಹೆಚ್ಚು ಹಣ ಕೊಟ್ಟು ಖರೀದಿಸಿರುವುದು, ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು ಈ ಬಗ್ಗೆ ತನಿಖೆಗೆ ಕಾಂಗ್ರೆಸ್ ಆಗ್ರಹಿಸುತ್ತಿದೆ ಎಂದರು.

ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಶಾಸಕ ರಿಜ್ವಾನ್ ಹರ್ಷದ್ ವಾತನಾಡಿ, ಕರೊನಾದಿಂದ ಸಾವಿರಾರು ಮಂದಿ ಮೃತಪಟ್ಟರೂ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ, ಹಣ ಲೂಟಿ ಮಾಡುತ್ತ ಹಬ್ಬ ಆಚರಿಸುತ್ತಿದೆ ಎಂದು ಆರೋಪಿಸಿದರು.

ಆರೋಗ್ಯ ಸಚಿವ ಶ್ರೀರಾಮುಲು ಕರೊನಾ ಸಾವಿನ ಸಂಖ್ಯೆ ಮತ್ತು ಸೋಂಕಿನ ಸಂಖ್ಯೆ ಹೆಚ್ಚಾಗಿ ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಎಲ್ಲವೂ ದೇವರೆ ನೋಡಿಕೊಳ್ಳಬೇಕು ಎಂದು, ಕಾನೂನು ಸಚಿವ ಜೆ.ಸಿ.ವಾಧುಸ್ವಾಮಿ ನಮ್ಮ ಕೈಮೀರಿದೆ ಎಂದು ಅಸಹಾಯಕತೆ ತೋರಿದ್ದಾರೆ, ಇದು ಇವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದರು.

ಪಿಪಿಇ ಕಿಟ್ ಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಒಂದು ಪಿಪಿಇ ಕಿಟ್ ಬೆಲೆ ಛತ್ತೀಸ್‌ಡದಲ್ಲಿ 550 ರೂ. ಮಹಾರಾಷ್ಟ್ರದಲ್ಲಿ 520, ಗುಜರಾತ್‌ನಲ್ಲಿ 480 ರೂ. ಇದ್ದರೆ ಕರ್ನಾಟಕ ಸರ್ಕಾರ 1180 ರೂ. ಖರೀದಿ ವಾಡಿದೆ. ಇಲ್ಲಿ ಏಕೆ ಇಷ್ಟೊಂದು ಬೆಲೆ ನೀಡಬೇಕಾಗಿ ಬಂತು? ನಾವು ಬೇರೆ ದೇಶದಲ್ಲಿದ್ದೇವೆಯೇ? ದುಪ್ಪಟ್ಟು ಬೆಲೆ ನೀಡುವಂತಹ ಪರಿಸ್ಥಿತಿ ಏಕೆ ಬಂದು ಎಂದು ಪ್ರಶ್ನಿಸಿದರು.

ರ‌್ಯಾಪಿಡ್ ಆ್ಯಂಟಿಜನ್ ಕಿಟ್ ಬೆಲೆ ಛತ್ತೀಸ್‌ಡದಲ್ಲಿ 120, ಮಹಾರಾಷ್ಟ್ರದಲ್ಲೂ 150 ರೂ., ಗುಜರಾತ್‌ನಲ್ಲಿ 120 ರೂ. ಆದರೆ, ಕರ್ನಾಟಕದಲ್ಲಿ ಮಾತ್ರ 1200 ರೂ.ಗೆ ಖರೀದಿ ವಾಡಲಾಗಿದೆ. ಅಂದರೆ ಹತ್ತು ಪಟ್ಟು ಹೆಚ್ಚು ಬೆಲೆ ನೀಡಿದ್ದು ಇದರಲ್ಲಿ ಭಾರೀ ಪ್ರವಾಣದ ಅವ್ಯಹಾರ ನಡೆದಿದೆ ಎಂದು ಆಪಾದಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮೇಯರ್ ರಿದಾಬೇಗಂ, ವಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕರಾದ ಆರ್.ನಾರಾಯಣ್, ಷಫಿಅಹ್ಮದ್, ಡಾ.ರಫೀಕ್ ಅಹಮದ್ ಮತ್ತಿತರರು ಇದ್ದರು.

ಮುಗಿಯದ ಅಸಮಾಧಾನ!: ಜಿಲ್ಲಾ ಕಾಂಗ್ರೆಸ್ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿರುವ ಜಿಲ್ಲೆಯ ಪ್ರಮುಖ ಮುಖಂಡರಾದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೋಮವಾರದ ಕಾರ್ಯಕ್ರಮದಿಂದಲೂ ದೂರ ಉಳಿದಿದ್ದರು. ಮುಂಚೂಣಿಯಲ್ಲಿರುವ ಬಹುತೇಕ ನಾಯಕರು ಯಾವುದೇ ಚುನಾವಣೆಗಳಲ್ಲಿ ಸ್ಫರ್ಧಿಸಿಲ್ಲ, ಸ್ವಯಂೋಷಿತ ನಾಯಕರಾಗಿದ್ದು ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಕಚೇರಿ ಕಡೆ ಬರುತ್ತಿಲ್ಲ ಎಂದು ಕೆಲವರು ಗೊಣಗಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net