ಅಕ್ರಮ-ಸಕ್ರಮ ಮುಂದುರಿಸಲು ಆಗ್ರಹ

21GKK2
Published on

ಗೋಕಾಕ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಗುರುವಾರ ನಗರದಲ್ಲಿ ಸಭೆ ನಡೆಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾಕ್ಕೆ ಆಗ್ರಹಿಸಿದರು.

ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 12 ಗಂಟೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ಅಕ್ರಮ-ಸಕ್ರಮ ಯೋಜನೆ ಮುಂದುವರಿಸಿ ಹೊಸ ಪಂಪಸೆಟ್‌ಗಳಿಗೆ ಮಂಜೂರಾತಿ ನೀಡಬೇಕು. ಹಳೆಯ ವೈರಗಳನ್ನು ಬದಲಿಸಿ ರೈತರು ಹಾಗೂ ಜಾನುವಾರುಗಳ ಜೀವಹಾನಿ ತಪ್ಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರು.

ರಾಜ್ಯ ರೆತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಕಾರಿಗಳಾದ ಮಂಜುನಾಥ ಪೂಜೇರಿ, ಕುಮಾರ ತಿಗಡಿ, ಸಿದ್ದಲಿಂಗ ಪೂಜೇರಿ, ಲಾಲಸಾಬ ಶಿವಾಪೂರೆ, ರಾಯಪ್ಪ ದಾಸಪ್ಪನವರ, ರಾಮಪ್ಪ ಗೌಡಪ್ಪನವರ, ತಮ್ಮಣ್ಣ ಮನ್ನಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net