

ಕಾರ್ಕಳ: ವಿಧಾನಸಭಾ ಕ್ಷೇತ್ರದ ಕಾರ್ಕಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಸಭೆ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಕ್ರಮ ಸಮಿತಿ ಅಧ್ಯಕ್ಷರು, ಸದಸ್ಯರು, ಸದಸ್ಯ ಕಾರ್ಯದರ್ಶಿ ಹಾಜರಿದ್ದರು. 37 ಕಡತಗಳನ್ನು ಅಕ್ರಮ-ಸಕ್ರಮ ಸಮಿತಿ ಮುಂದೆ ಹಾಜರುಪಡಿಸಲಾಗಿದ್ದು, ಈ ಪೈಕಿ ಭೂಮಾಪಕರು ಸ್ವಾಧೀನಾನುಭೋಗದಂತೆ ತಯಾರಿಸಿದ ಮಂಜೂರಾತಿ ಪೂರ್ವ ನಕಾಶೆ 12 ಕಡತಗಳಲ್ಲಿ ಬಗರ್ಹುಕುಂ ಸಮಿತಿಯಿಂದ ಮಂಜೂರಾತಿಗೆ ಅಂತಿಮ ಆದೇಶ ಆದ ಪ್ರಕಾರ ಪೋಡಿ ದುರಸ್ತಿ ಸರ್ವೇ ಶಾಖೆಗೆ ರವಾನಿಸಲಾಯಿತು. 25 ಹೊಸ ಕಡತಗಳಿಗೆ ಸಂಬಂಧಿಸಿ 7 ಕಡತ ಮರು ತನಿಖೆಗೆ ಹಿಂತಿರುಗಿಸಲಾಯಿತು. 18 ಕಡತ ಮಂಜೂರಾತಿ ಬಗ್ಗೆ ಶಿಫಾರಸು ಮಾಡಿ ಸರ್ವೇಗೆ ಕಳುಹಿಸಲಾಯಿತು.
ಕಾರ್ಯದರ್ಶಿ ತಹಸೀಲ್ದಾರ್ ಪ್ರದೀಪ್ ಆರ್, ಸದಸ್ಯರಾದ ನವೀನ್ ದೇವಾಡಿಗ, ರಮೇಶ್ ಬಜಕಲ, ಸುನೀತಾ ಶೆಟ್ಟಿ, ಉಪತಹಸೀಲ್ದಾರ್ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕ, ಕಾರ್ಕಳ ಹೋಬಳಿ, ಅಜೆಕಾರು ಹೋಬಳಿ ವಿಷಯ ನಿರ್ವಾಹಕರು ತಾರೇಶ್, ಗ್ರಾಮ ಅಭಿವೃದ್ಧಿ ಅಧಿಕಾರಿ ಪೂಜಾ ಬಿ ಉಪಸ್ಥಿತರಿದ್ದರು.