

ರಾಣೆಬೆನ್ನೂರ: ಕಬ್ಬಿಣ ಕಳುಹಿಸಿಕೊಡುವುದಾಗಿ ನಂಬಿಸಿ ಇಲ್ಲಿಯ ವ್ಯಕ್ತಿಯೊಬ್ಬನಿಗೆ ೩೯ ಲಕ್ಷ ರೂ. ವಂಚಿಸಿದ ಕುರಿತು ಹಾವೇರಿ ಸೈಬರ್ ಕ್ರೆÊಂ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಮೃತ್ಯುಂಜಯ ನಗರದ ಇಲಿಯಾಸಹಮ್ಮದ್ ಜೈರುದ್ದಿನ ಬಳ್ಳಾರಿ (೪೫) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಫೋನ್ ಮಾಡಿದ ವ್ಯಕ್ತಿ ವೈಜಾಗ್ ಸ್ಟೀಲ್ ಲಿಮಿಟೆಡ್‌ನ ವ್ಯವಸ್ಥಾಪಕ ವಿಶ್ವನಾಥ ಎಂದು ನಂಬಿಸಿದ್ದಾನೆ. ನಂತರ ನಿಮಗೆ ೬೦ ೬೦ ಟನ್ ಕಬ್ಬಿಣ ಕಳುಹಿಸಿಕೊಡುತ್ತೇನೆ ಎಂದು ೩೯.೯೬ ಲಕ್ಷ ರೂ. ಹಾಕಿಸಿಕೊಂಡಿದ್ದಾನೆ. ನಂತರ ಕಬ್ಬಿಣ ಕಳುಹಿಸಿಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.