ಕಬ್ಬಿಣದ ಪೌಡರ್​ ಕೊಡುವುದಾಗಿ 8.19 ಲಕ್ಷ ರೂ. ವಂಚನೆ

Crime Logo
Published on

ರಾಣೆಬೆನ್ನೂರ: ಕಬ್ಬಿಣದ ಪೌಡರ್​ ಕೊಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿರುವ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್​ ನಿವಾಸಿ ಅಲ್ತಾಫ್​ ಹುಸೇನ ಮಹಬೂಬ (34) ವಂಚಿರುವ ಆರೋಪಿ.

ಈತನ ವಿರುದ್ಧ ಇಲ್ಲಿಯ ಈಶ್ವರ ನಗರದ ಕಾಂತೇಶ ಕೃಷ್ಣಮೂತಿರ್ ರಾಣೆಬೆನ್ನೂರ (44) ಎಂಬುವರು ದೂರು ನೀಡಿದ್ದಾರೆ. ಆರೋಪಿಯು ಕಬ್ಬಿಣದ ಪೌಡರ್​ ಕಳುಹಿಸಿಕೊಡುವುದಾಗಿ ಹೇಳಿ 1.14 ಕೋಟಿ ರೂ. ಪಡೆದುಕೊಂಡಿದ್ದಾನೆ. ಅದರಲ್ಲಿ 8.19 ಲಕ್ಷ ರೂ. ಬಾಕಿ ಕೊಡುವುದಿದ್ದು ಇಂದು-ನಾಳೆ ಎಂದು ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net