

ಕಾರವಾರ: ಅಕ್ರಮ ಗಣಿಗಾರಿಕೆ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ಸಚಿವ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನು ಕ್ಯಾಬಿನೇಟ್ ಅಂಗೀಕರಿಸಿದೆ. ಗಣಿ ಧೂಳಿನ ಕಳಂಕ ತೊಳೆದು ಇನ್ನೇನು ನಾವು ಬಚಾವಾದೆವು ಎಂದು ನಿರಾಳರಾಗಿದ್ದ ಅಽಕಾರಿ ಮತ್ತು ನಿವೃತ್ತ ಅಧಿಗಳಿಗೆ ಮತ್ತೆ ನಡುಕ ಶುರುವಾಗಿದೆ. ಸರ್ಕಾರ ನುಡಿದಂತೆ ನಡೆದರೆ, 14 ವರ್ಷಗಳಿಂದ ಧೂಳು ಹಿಡಿದ ಲೋಕಾಯುಕ್ತ ಫೈಲ್ ಮತ್ತೆ ಝಾಡಿಸಿ ತೆಗೆದರೆ, ಬಳ್ಳಾರಿ, ಹೊಸಪೇಟೆ, ಕಾರವಾರ, ಬೆಂಗಳೂರು ಸೇರಿ ವಿವಿಧೆಡೆ ಇರುವ ಹಲವು ಅಧಿಕಾರಿಗಳು ಮತ್ತು ನಿವೃತ್ತರಿಗೆ ಕಂಠಕ ಎದುರಾಗುವುದು ಖಚಿತವಾಗಿದೆ.
2000 ದಿಂದ 2010 ರವರೆಗೆ ನಡೆದ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ 2011 ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ 730 ಅಽಕಾರಿಗಳು ಲಂಚ ಪಡೆದ ಬಗ್ಗೆ ಪ್ರಸ್ತಾಪವಿತ್ತು. ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಬಂದರು ಹೀಗೆ ವಿವಿಧ ಇಲಾಖೆಗಳ ಹಿರಿಯ ಐಎಎಸ್ ಅಽಕಾರಿಗಳಿಂದ ಹಿಡಿದು ಸಾಮಾನ್ಯ ಸಿಬ್ಬಂದಿಯವರೆ ಹಲವರ ಹೆಸರು ಉಲ್ಲೇಖಿಸಲಾಗಿತ್ತು. ಮಾತ್ರವಲ್ಲ ಅವರಿಗೆ ಮಾಸಿಕ ಎಷ್ಟು ಲಂಚ ನೀಡಲಾಗುತ್ತಿತ್ತು ಎಂಬುದನ್ನೂ ವರದಿ ಹೇಳಿತ್ತು.
ಕಾರವಾರ ಬಂದರು ನಿರ್ದೇಶಕರು, ಬಂದರು ಅಽಕಾರಿ, ಬಂದರು ಸಂರಕ್ಷಣಾಧಿಕಾರಿ, ಸಾಮಾನ್ಯ ಬಂದರು ಕಾವಲು ಸಿಬ್ಬಂದಿ ಸೇರಿ 24 ಅಧಿಕಾರಿಗಳ ಮೇಲೆ ಲಂಚದ ಆರೋಪಗಳಿದ್ದವು. ಅದಿರು ತುಂಬಿದ ಪ್ರತಿ ಹಡಗು ಕಾರವಾರದಿಂದ ಬಿಡಲು ನಿರ್ದೇಶಕರಿಗೆ 50 ಸಾವಿರ ರೂ. ನೀಡಬೇಕು. ಬಂದರು ಅಧಿಕಾರಿಗೆ 25 ಸಾವಿರ ರೂ. ನೀಡಬೇಕು. ಉಪ ಸಂರಕ್ಷಣಾಧಿಕಾರಿಗೆ 5 ಸಾವಿರ ರೂ. ಬಂದರು ಸಿಬ್ಬಂದಿಗೆ 5,500, ಕಸ್ಟಮ್ಸ್ ಎಸಿಗೆ ಪ್ರತಿ ಮೂರು ತಿಂಗಳಿಗೆ 1 ಲಕ್ಷ ರೂ. ಎಸ್‌ಪಿಗೆ ಪ್ರತಿ 2 ತಿಂಗಳಿಗೆ 1 ಲಕ್ಷ ರೂ. ಎಎಸ್‌ಪಿಗೆ ಮಾಸಿಕ 25 ಸಾವಿರ ರೂ. ಡಿವೈಎಸ್‌ಪಿಗೆ ಮಾಸಿಕ 10 ಸಾವಿರ ರೂ. ಸಿಪಿಐಗೆ 14 ಸಾವಿರ ರೂ. ಪೊಲೀಸ್ ಔಟ್ ಪೋಸ್ಟ್ಗೆ 5 ಸಾವಿರ ರೂ. ನೀಡಲಾಗುತ್ತಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಗಣಿ ಕಂಪನಿಗಳ ಕಂಪ್ಯೂಟರ್‌ಗಳಲ್ಲಿ ಲಭ್ಯವಾಗಿರುವ ದಾಖಲೆ ಆಧರಿಸಿ ಲೋಕಾಯುಕ್ತ ವರದಿ ಮಾಡಿತ್ತು.
ಲಂದದ ಆರೋಪ ಹೊತ್ತ ಅಧಿಕಾರಿಗಳ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಲೋಕಾಯುಕ್ತ ಶಿಫಾರಸು ಮಾಡಿತ್ತು. ಆದರೆ, ಶಿಫಾರಸುಗಳು ಜಾರಿಯಾಗಿರಲಿಲ್ಲ. ಪ್ರಭಾವ ಬಳಸಿದ್ದ ಹಲವು ಅಧಿಕಾರಿಗಳು ಒಬ್ಬೊಬ್ಬರಾಗಿ ಪ್ರಕರಣದಿಂದ ನುಣುಚಿಕೊಂಡಿದ್ದರು. 24 ಅಽಕಾರಿಗಳ ಮೇಲೆ ಇರುವ ಆರೋಪ ಸಾಬೀತಾಗಿಲ್ಲ ಎಂದು ಅವರನ್ನು ಈ ಹಿಂದೆ ರಾಜ್ಯ ಸರ್ಕಾರವೇ ರಚಿಸಿದ್ದ ಎಸ್‌ಐಟಿ ಈ ಹಿಂದೆ ನ್ಯಾಯಾಲಯಕ್ಕೆ ವರದಿ ನೀಡಿತ್ತು.
ಈಗ ಎಸ್‌ಐಟಿ ನೀಡಿದ್ದ ವರದಿಯನ್ನು ಮರು ಪರಿಶೀಲನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನೂ ಅನುಮತಿ ದೊರೆಯದ 9 ಬಿ ವರದಿಯನ್ನು ವಾಪಸ್ ಪಡೆಯಲು ಸರ್ಕಾರ ತೀರ್ಮಾನಿಸಿದೆ. ವರದಿಯಲ್ಲಿದ್ದ ಹಲವು ಅಧಿಕಾರಿಗಳು ಸೇವೆಯಿಂದ ನಿವೃತ್ತರಾಗಿದ್ದಾರೆ. ಆದರೂ ಅವರೆಲ್ಲರಿಗೂ ಕಂಠಕ ಎದುರಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ನಾಯಕರಿಗೂ ಕಂಠಕ..?
ಅಕ್ರಮ ಅದಿರು ಸಾಗಣೆ ಸಂಬಂಧ ಲೋಕಾಯುಕ್ತ ಮೊದಲು ತನಿಖೆ ನಡೆಸಿತ್ತು. ನಂತರ ಸಿಐಡಿ, ಸಿಬಿಐ, ಎಸ್‌ಐಟಿ ಸೇರಿ ವಿವಿಧ ತನಿಖಾ ಸಂಸ್ಥೆಗಳು ಗಣಿ ಧಣಿಗಳ, ಅಧಿಕಾರಿಗಳ ಜನ್ಮ ಜಾಲಾಡಿವೆ. ಆದರೆ ಇದುವರೆಗೆ ಬೆರಳೆಣಿಕೆಯ ಮಂದಿಗೆ ಮಾತ್ರ ಶಿಕ್ಷೆಯಾಗಿದೆ.
ಸಿಬಿಐ ಒಟ್ಟು 9 ಪ್ರತ್ಯೇಕ ಚಾರ್ಜ್ ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರಂತೆ ಸದ್ಯ ಇದುವರೆಗೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಕಾರವಾರ ಶಾಸಕ ಸತೀಶ ಸೈಲ್, ಬೇಲೆಕೇರಿ ಬಂದರು ಸಂರಕ್ಷಣಾಽಕಾರಿ ಮಹೇಶ ಬಿಲಿಯೆ ಹಾಗೂ ಬಳ್ಳಾರಿ ಮೂಲದ ಇತರ ಕೆಲವು ಉದ್ಯಮಿಗಳಿಗೆ ಮಾತ್ರ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ. ಕಾರವಾರ ಶಾಸಕ ಸೈಲ್ ಸೇರಿ ಇತರರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ. ಆದರೆ, ಸೈಲ್‌ಗೆ ಈಗ ಸಿಬಿಐ, ಇಡಿ ಜತೆ ಅವರದ್ದೇ ಸರ್ಕಾರದ ಎಸ್‌ಐಟಿಯಿಂದಲೂ ಕಿರಿಕಿರಿ ಶುರುವಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಯಲ್ಲಾಪುರ ಕಾಂಗ್ರೆಸ್ ನಾಯಕ ವಿವೇಕ ಹೆಬ್ಬಾರ ಅವರ ಹೆಸರೂ ಸಿಬಿಐ ಸೇರಿ ಇತರ ತನಿಖಾ ಸಂಸ್ಥೆಗಳ ಪಟ್ಟಿಯಲ್ಲಿದ್ದು, ಅವರಿಗೂ ಮತ್ತೆ ಕಂಠಕ ಎದುರಾದರೆ ಅಚ್ಚರಿಯಿಲ್ಲ.
ಏನೇನಾಗಿತ್ತು..?