ಗಜಪಡೆಗೆ ಕಬ್ಬಿಣದ ತಡೆಬೇಲಿ

hosuru
ಕಬ್ಬಿಣದ ತಡೆಬೇಲಿಯನ್ನು ಶನಿವಾರ ಪರಿಶೀಲನೆ ನಡೆಸಿದರು.
Published on

ತಮಿಳುನಾಡು-ಕರ್ನಾಟಕ ಅರಣ್ಯಾಧಿಕಾರಿಗಳ ಪರಿಶೀಲನೆ

350 ಮೀಟರ್ ಪ್ರಾಯೋಗಿಕ ಬೇಲಿ ನಿರ್ಮಾಣ


ವಿಜಯವಾಣಿ ಸುದ್ದಿಜಾಲ ಹೊಸೂರು
ಕೃಷ್ಣಗಿರಿ ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿ ಭಾಗದ ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡೂ ರಾಜ್ಯದ ಅರಣ್ಯಾಧಿಕಾರಿಗಳು ಜಂಟಿಯಾಗಿ ಆನೆ ಹಾಗೂ ಇನ್ನಿತರ ಕಾಡುಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕದಂತೆ ತಡೆಯಲು ಪ್ರಾಯೋಗಿಕವಾಗಿ ನಿರ್ಮಾಣ ಮಾಡಿರುವ ಕಬ್ಬಿಣದ ತಡೆಬೇಲಿಯನ್ನು ಶನಿವಾರ ಪರಿಶೀಲನೆ ನಡೆಸಿದರು.
ಸುಮಾರು 12 ಅಡಿ ಎತ್ತರದ ಕಂಬಗಳ ಜತೆಗೆ 350 ಮೀಟರ್ ಸುತ್ತಳತೆಯಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಸುಮಾರು 12 ಅಡಿಗಳ ಎತ್ತರದ ಕಂಬಗಳೊಂದಿಗೆ ನಿರ್ಮಿತವಾದ ತಂತಿ ಬೇಲಿಯನ್ನು ಆನೆಗಳ ಮೂಲಕ ತಳ್ಳಲು ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
1.50 ಕೋಟಿ ರೂ.ಬಿಡುಗಡೆ: ಕಾಡು ಪ್ರಾಣಿಗಳು ಗ್ರಾಮಗಳ ಮೇಲೆ ದಾಳಿ ಮಾಡುತ್ತಿವೆ, ಜಮೀನುಗಳಲ್ಲಿ ಬೆಳೆ ನಾಶ ಸೇರಿ ಮನುಷ್ಯರ ಪ್ರಾಣಕ್ಕೂ ಕುತ್ತು ತರುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಬೆಂಗಳೂರು ಸಮೀಪದಲ್ಲಿರುವ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಡಂಗಣಿಕೋಟೆ ಪ್ರದೇಶಕ್ಕೆ ಆಗಮಿಸುವ ಆನೆಗಳ ತಂಡ ಮಾರ್ಚ್ ವೇಳೆ ಮತ್ತೆ ಬನ್ನೇರುಘಟ್ಟ ಅರಣ್ಯ ಪ್ರದೇಶದತ್ತ ಮರಳುತ್ತವೆ ಇತ್ತೀಚಿನ ದಿನಗಳಲ್ಲಿ ಕಾಡಿನಲ್ಲಿ ಸರಿಯಾದ ನೀರು ಆಹಾರ ಸಿಗದೆ ನಾಡಿನತ್ತ ಗಜಪಡೆ ಪ್ರಯಾಣ ಬೆಳೆಸುತ್ತಿದೆ ಹೀಗಾಗಿ ಎರಡೂ ರಾಜ್ಯಗಳ ಅಧಿಕಾರಿಗಳು ಮಾರ್ಗೋಪಾಯ ಕುರಿತು ಚರ್ಚಿಸಿದ್ದರು. ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಕಾರ್ತಿಕೇಯನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ 1.50 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದು ಸುಮಾರು 5 ಕಿ.ಮೀ ವ್ಯಾಪ್ತಿಗೆ ಬೇಲಿ ನಿರ್ಮಿಸಲು ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯೋಜನೆ ವಿಸ್ತರಣೆ: ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿ ಪ್ರಭಾಕರನ್ ಪ್ರಿಯರಂಗನ್ ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಈ ಯೋಜನೆ ವಿಸ್ತರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ನಗರೀಕರಣ ನೆಪದಲ್ಲಿ ಅರಣ್ಯ ವ್ಯಾಪ್ತಿಯನ್ನು ಕಡಿಮೆ ಮಾಡಿರುವ ಕಾರಣ ತನ್ನ ಪಥದಲ್ಲೇ ಸಂಚರಿಸುವ ಆನೆಗಳು ಕಾಡಂಚಿನ ಹಳ್ಳಿಗಳ ಮೂಲಕ ನಾಡಿಗೆ ಬರುತ್ತಿವೆ, ನಾವು ಬದುಕಿ ಬಾಳುವಂತೆ ಕಾಡಿನ ಪ್ರಾಣಿಗಳಿಗೂ ಬದುಕಿ ಬಾಳುವ ಅವಕಾಶ ಕೊಡಬೇಕು ಎಂದು ಹೊಸೂರು ವಲಯ ಅರಣ್ಯಾಧಿಕಾರಿ ಕಾತ್ಯಾಯಿನಿ ತಿಳಿಸಿದರು. ಕಾಡಾನೆಗಳು ದಿನಕ್ಕೆ 40 ರಿಂದ 80 ಕಿ.ಮೀ ಸಂಚರಿಸುತ್ತದೆ. ಕಾಡಾನೆಗಳು ನಾಡಿಗೆ ಬರುವುದನ್ನು ತಡೆಗಟ್ಟಲು ಹಲವಾರು ತಂತ್ರಜ್ಞಾನ ಪೂರಕ ಸುಧಾರಣೆಗಳನ್ನು ಅರಣ್ಯ ಇಲಾಖೆ ಅಳವಡಿಸಿಕೊಂಡಿದೆ ಎಂದರು. ಮುಂದಾಗಬಹುದಾದ ಅವಘಡಗಳನ್ನು ತಡೆದು ಆನೆ ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಯಬಹುದು ತಡೆಯಬಹುದು ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಡಿಸಿಎ್ ಪ್ರಭಾಕರ್ ಪ್ರಿಯದರ್ಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net