ಶಾಂತಿಯುತವಾಗಿ ಕುಂಭೋತ್ಸವ ಆಚರಿಸಿ

Untitled design11115
ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಪಿಎಸ್‌ಐ ಶಾಂತಮೂರ್ತಿ ಮಾತನಾಡಿದರು. ಅಪರಾಧ ವಿಭಾಗದ ಪಿಎಸ್‌ಐ ಶ್ರೀನಿವಾಸಲು, ಎಎಸ್‌ಐ ಎಚ್.ಗಂಗಣ್ಣ ಇತರರಿದ್ದರು.
Published on

ಸಿರಿಗೇರಿ: ಗ್ರಾಮದೇವತೆಗಳಾದ ಶ್ರೀ ದ್ಯಾವಮ್ಮ, ಮಾರೆಮ್ಮ, ದುಗ್ಗಲಮ್ಮ, ಸುಂಕಲಮ್ಮ ದೇವಿ ಕುಂಭೋತ್ಸವ ನಿಮಿತ್ತ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ಶಾಂತಿ ಸಭೆ ನಡೆಯಿತು.

ಡಿ.19 ಮತ್ತು 20ರಂದು ಗ್ರಾಮದೇವತೆಗಳ ಕುಂಭೋತ್ಸವ

ಪಿಎಸ್‌ಐ ಶಾಂತಮೂರ್ತಿ ಮಾತನಾಡಿ, ಗ್ರಾಮದಲ್ಲಿ ಡಿ.19 ಮತ್ತು 20ರಂದು ಗ್ರಾಮದೇವತೆಗಳ ಕುಂಭೋತ್ಸವ ನಡೆಯಲಿದ್ದು, ಶಾಂತಿಯುತವಾಗಿ ಆಚರಿಸಬೇಕು. ಟ್ರಾಫಿಕ್ ಆಗದಿರಲು ನಾವು ಸೂಚಿಸಿದ ಸ್ಥಳದಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಕುಟುಂಬದ ಸಂಬಂಧಿಕರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ, ಗುಂಪು ಕೂಡುವುದು, ಗಲಾಟೆ ಗದ್ದಲ ಮಾಡಬಾರದು. ಶಾಂತ ರೀತಿಯಲ್ಲಿ ಸೌಹಾರ್ದಯುವಾಗಿ ಕುಂಭೋತ್ಸವ ಆಚರಿಸಬೇಕು. ಮುನ್ನೆಚರಿಕೆ ಕ್ರಮವಾಗಿ ಅಗತ್ಯ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಹೊಳಗುಂದಿ ದ್ಯಾವಣ್ಣ, ಸಿ.ಎಂ.ನಾಗರಾಜ್ ಸ್ವಾಮಿ, ಅಡಿವಯ್ಯ ಸ್ವಾಮಿ, ರಾರಾವಿ ವೆಂಕಟೇಶ್, ಓರ‌್ವಾಯಿ ಹೊನ್ನೂರಪ್ಪ, ಬಿಚ್ಚುಗತ್ತಿ ಮಲ್ಲಯ್ಯ, ಹಳ್ಳಿಮರದ ವೀರೇಶ್, ಡ್ರೈವರ್ ಹುಲುಗಪ್ಪ, ವಿ.ಹನುಮೇಶ್, ಬಕಾಡೆ ಈರಯ್ಯ, ಎಚ್.ಗಾದಿಲಿಂಗಪ್ಪ, ಹಳ್ಳಿ ನಾಗಪ್ಪ, ಪವಾಡಿ ನಾಯಕ, ವಿ.ಶೇಖರಪ್ಪ, ಬಿ.ಉಮೇಶ್, ಪೂಜಾರಿ ಸಿದ್ದಯ್ಯ, ವಿ.ರೇಣುಕಪ್ಪ, ಗೋಡೆ ಚಿನ್ನಪ್ಪ, ಅಹ್ಮದ್ ಸಾಬ್, ಆಲಂ ಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net