ಪುತ್ತೂರಿನ ಜೂಸ್ ಸೆಂಟರ್‌ನಲ್ಲಿ ಬೆಂಕಿ ಅನಾಹುತ

080422 Devipura Fire on Jawara Banavi
ದೇವಿಪುರದಲ್ಲಿ ಗುರುವಾರ ರಾತ್ರಿ ಹೊತ್ತಿ ಉರಿದ ಮೇವಿನ ಬಣವಿಗಳು.
Published on

ಈಶ್ವರಮಂಗಲ: ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂದೂಸ್ತಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಜೂಸ್ ಸೆಂಟರ್‌ನಲ್ಲಿ ಸೋಮವಾರ ಮುಂಜಾನೆ ಬೆಂಕಿ ಅನಾಹುತ ಸಂಭವಿಸಿದೆ. ಅಂಗಡಿಯ ಕೆಲ ವಸ್ತುಗಳಿಗೆ ಹಾನಿಯಾಗಿದೆ. ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ತಕ್ಷಣದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಯೋಗೀಶ್ ರೈ ಎಂಬವರ ಮಾಲಕತ್ವದ ಜೂಸ್ ಸೆಂಟರ್‌ನಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್ ನಿಲ್ದಾಣದ ಪೊಲೀಸ್ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೀಮ್‌ಸೇನ್ ಮತ್ತು ಗೃಹರಕ್ಷಕ ದಳದ ಸುದರ್ಶನ್ ಅವರು ಕಟ್ಟಡದಲ್ಲಿ ಹೊಗೆ ಕಂಡು ಕೂಡಲೇ ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಚಕ್ರಪಾಣಿ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.

ಅಗ್ನಿಶಾಮಕ ದಳದವರು ಬಂದು ಜೂಸ್ ಸೆಂಟರಿನ ಶಟರ್ ಬೀಗ ಒಡೆದು ಬೆಂಕಿ ಹತ್ತಿಕೊಂಡಿದ್ದ ಅಡುಗೆ ಅನಿಲವನ್ನು ಸ್ಟೌನಿಂದ ಬೇರ್ಪಡಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲೇ ಅಂಗಡಿಯೊಳಗಿದ್ದ ಕೆಲ ವಸ್ತುಗಳು ಬೆಂಕಿಗಾಹಿತಿಯಾಗಿದ್ದವು. ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಹಲವು ಅಂಗಡಿಗಳಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net