

ಸಂಡೂರು: ಮಕ್ಕಳಿಗೆ ಇರುಳುಗಣ್ಣು ತಪ್ಪಿಸಲು ಕಡ್ಡಾಯವಾಗಿ ಎ ಅನ್ನಾಂಗ ದ್ರಾವಣ ಹಾಕಿಸಬೇಕಿದ್ದು, ಕಣ್ಣಿನ ತೊಂದರೆ, ಗಂಟಲಿನ ಸೋಂಕು, ನಿವಾರಣೆಗೆ ಜೊತೆಗೆ ದೃಷ್ಟಿಯನ್ನು ಸಂರಕ್ಷಣೆ ಮಾಡಲು ಇದು ಸಹಕಾರಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.
ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣದ ಬಿ.ಆರ್.ಕ್ಯಾಂಪಿನಲ್ಲಿ 1.3ವರ್ಷದಿಂದ 5 ವಷರ್ದೊಳಗಿನ ಮಕ್ಕಳಿಗೆ ಎ ಅನ್ನಾಂಗ ದ್ರಾವಣ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಸೋಮವಾರ ಮಾತನಾಡಿದರು. ಐದು ವಷರ್ ತುಂಬುವುದರೊಳಗೆ ಒಟ್ಟು ಒಂಬತ್ತು ಡೋಸ್ ಎ ಅನ್ನಾಂಗ ದ್ರಾವಣ ನೀಡಲಾಗುತ್ತಿದೆ. ಎ ಅನ್ನಾಂಗ ಅಥವಾ ವಿಟಮಿನ್ ಎ ಹೇರಳವಾಗಿ ದೊರೆಯುವ ಆಹಾರ ಪದಾರ್ಥಗಳಾದ ಕಡು ಹಸಿರು ಬಣ್ಣದ ಸೊಪ್ಪುಗಳು, ಕ್ಯಾರೆಟ್ ಮತ್ತು ಹಳದಿ ಬಣ್ಣದ ಆರೇಂಜ್ ಪಪ್ಪಾಯಿ ಹಣ್ಣು, ಹಾಲು, ಮೊಟ್ಟೆ ತಿನ್ನಬೇಕು ಎಂದರು.